ಮೈಸೂರಿನ ಹಾರ್ಡಿಂಜ್ ವೃತ್ತದಲ್ಲಿರುವ ಪ್ರಿಪೇಯ್ಡ್ ಆಟೋ ನಿಲ್ದಾಣ ಕಾರ್ಯಾರಂಭವಾಗುವುದೇ ಬೆಳಿಗ್ಗೆ ೧೧ರ ನಂತರ ಇದರಿಂದಾಗಿ ಮುಂಜಾನೆ ಕೆಲಸಕ್ಕೆ ಹೋಗುವವರಿಗೆ ತೀವ್ರ ತೊಂದರೆಯಾಗಿದೆ. ಇತರೆ ಬಾಡಿಗೆ ಆಟೋದವರು ಕನಿಷ್ಠ ಆಟೋ ದರ ೪೦ ರೂ. ಇದ್ದರೂ ೧೦೦ ರೂ. ಗೂ ಹೆಚ್ಚು ಹಣ ಕೇಳುತ್ತಾರೆ. ನಿಯಮ ಉಲ್ಲಂಸುವ ಆಟೋ ಚಾಲಕರ ವಿರುದ್ಧ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.
ಸಂಬಂಧಪಟ್ಟವರು ಹಾರ್ಡಿಂಜ್ ವೃತ್ತದ ಪ್ರಿಪೇಯ್ಡ್ ಆಟೋ ನಿಲ್ದಾಣವನ್ನು ಬೆಳಿಗ್ಗೆ ೭ರಿಂದಲೇ ಆರಂಭಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚು ಹಣ ಪಡೆಯುವ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ.
-ಆಶಾರಾಣಿ, ಮೈಸೂರು





