ಮೈಸೂರಿನ ಜಿಲ್ಲಾ ನ್ಯಾಯಾಲಯಗಳಿಗೆ ಸಾಕಷ್ಟು ಬಸ್ ಸೌಲಭ್ಯವಿಲ್ಲದೆ ನ್ಯಾಯಾಲಯದ ಕಲಾಪಗಳಿಗೆ ಬರುವ ವಕೀಲರು ಹಾಗೂ ಕಕ್ಷಿದಾರರಿಗೆ ತೀವ್ರ ತೊಂದರೆಯಾಗಿದೆ.
ನಗರ ಸಾರಿಗೆ ಬಸ್ ನಂ.೮೦, ೬೨ ಬಲ್ಲಾಳ್ ಸರ್ಕಲ್ ಮಾರ್ಗವಾಗಿ ತೆರಳುವ ಬದಲು ಆರ್‌ಟಿಒ ಕಚೇರಿ ಮೂಲಕ ಚಾಮರಾಜಪುರಂ ರೈಲ್ವೆ ಸ್ಟೇಷನ್ ಮಾರ್ಗವಾಗಿ ಜಯನಗರಕ್ಕೆ ಸಂಚರಿಸಿದಲ್ಲಿ ಎರಡೂ ಜಿಲ್ಲಾ ನ್ಯಾಯಾಲಯಗಳಿಗೂ ಬಸ್ ಸೌಲಭ್ಯ ಕಲ್ಪಿಸಿದಂತಾಗುತ್ತದೆ. ಈ ಬಗ್ಗೆ ಮೈಸೂರು ನಗರ ಸಾರಿಗೆ ಅಽಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ.
-ರತ್ನ ಹುಲ್ಲಳ್ಳಿ, ವಕೀಲರು, ನಂಜನಗೂಡು





