ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಲೇ ಇದೆ. ಆಸ್ತಿ ನೋಂದಣಿ ಶುಲ್ಕ, ಛಾಪಾ ಮುದ್ರಾಂಕನ ಶುಲ್ಕ, ಮೆಟ್ರೋ ಪ್ರಯಾಣ ದರ, ಬಸ್ ಪ್ರಯಾಣ ದರ, ವಿದ್ಯುತ್, ಹಾಲು, ಮೊಸರು, ಡೀಸೆಲ್ ದರಗಳು ಏರಿಕೆಯಾಗಿವೆ .
ಹಾಲು ಲೀಟರಿಗೆ ನಾಲ್ಕು ರೂಪಾಯಿ ಜಾಸ್ತಿಯಾದರೆ, ಹೋಟೆಲ್ ನವರು ಒಂದು ಕಪ್ ಕಾಫಿ, ಟೀಗೆ ಕನಿಷ ಮೂರು ರೂಪಾಯಿ ಏರಿಸುತ್ತಾರೆ. ಮೊಸರು ಲೀಟರಿಗೆ ನಾಲ್ಕು ರೂ. ಹೆಚ್ಚಾದರೆ, ಹೋಟೆಲ್ ಊಟದಲ್ಲಿ ನೀಡುವ ಮೊಸರಿಗೆ ಎರಡು ರೂ. ಜಾಸ್ತಿಯಾಗುತ್ತದೆ.
ಡೀಸೆಲ್ ದರ ಜಾಸ್ತಿಯಾಗಿದ್ದು, ಮತ್ತೆ ಬಸ್ ಪ್ರಯಾಣ ದರ, ಕ್ಯಾಬ್ ಪ್ರಯಾಣ ದರ ಹಾಗೂ ಸರಕು ಸಾಗಣೆದರಗಳೂ ಜಾಸ್ತಿಯಾಗಲಿದ್ದು, ಪರೋಕ್ಷವಾಗಿ ಜನ ಸಾಮಾನ್ಯರ ಮೇಲೆಯೇ ದರ ಏರಿಕೆಯ ಬರೆ ಬೀಳಲಿದೆ. ಹಿಂದೆಲ್ಲಾ ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಳ ಮಾಡಿದ್ದೇವೆ ಎನ್ನುತ್ತಿದ್ದ ಸಚಿವರೊಬ್ಬರು ಪ್ರಸ್ತುತ ಸರ್ಕಾರ ವೈಜ್ಞಾನಿಕವಾಗಿ ದರ ಹೆಚ್ಚಳ ಮಾಡಿದೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಅಗತ್ಯ ವಸ್ತುಗಳ ದರ ಏರಿಕೆಯನ್ನು ನೋಡಿದರೆ ಕವಿ ಕಯ್ಯಾರ ಕಯ್ಯಾರ ಕಿಞ್ಞಣ್ಣ ರೈ ರವರ ಕವನ ‘ಏರುತಿಹುದು ಹಾರುತಿಹುದು’ ಕವನ ನೆನಪಿಗೆ ಬರುತ್ತದೆ.
– ವಿಜಯ್ ಹೆಮ್ಮಿಗೆ, ಮೈಸೂರು





