ರಾಜ್ಯ ಸರ್ಕಾರ ಏಪ್ರಿಲ್ ಒಂದರಿಂದ ಅನ ಯ ವಾಗುವಂತೆ ಹಾಲು, ಮೊಸರು, ವಿದ್ಯುತ್ ಹಾಗೂ ಡೀಸೆಲ್ ದರಗಳನ್ನು ಹೆಚ್ಚಿಸಿ ರಾಜ್ಯದ ಜನರ ಬದುಕಿನ ಮೇಲೆ ಬರೆ ಎಳೆದಿದೆ.
ಹಾಲು, ಮೊಸರಿನ ದರ ೪ ರೂ. ಹೆಚ ಳ ಆಗಿದೆ. ವಿದ್ಯುತ್ ದರ ಹೆಚ್ಚಿಸಿ ಗ್ರಾಹಕರಿಗೆ ಆಘಾತ ನೀಡಲಾಗಿದೆ. ಏ.೧ರ ಮಧ್ಯರಾತ್ರಿಯಿಂದ ಡೀಸೆಲ್ ದರ ೨ ರೂ. ಹೆಚ್ಚಳವಾಗಿದ್ದು, ಬಡವರು ಬದುಕು ನಡೆಸುವುದೇ ದುಸ್ತರವಾಗಿದೆ. ಸರ್ಕಾರ ಮತ್ತು ಅದರ ಅಧೀನ ಸಂಸ್ಥೆಗಳು ದುಂದುವೆಚ್ಚಕ್ಕೆ ಕಡಿವಾಣ ಹಾಕಿ, ಕಾರ್ಯ ಕ್ಷಮತೆಯನ್ನು ಹೆಚ್ಚಿಸಿಕೊಂಡರೆ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರಬಹುದು. ಈ ದಿಸೆಯಲ್ಲಿ ಸರ್ಕಾರ ಈಗಲಾದರೂ ಎಚ್ಚೆತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕಿದೆ.
– ಸಿದ್ಧಲಿಂಗೇಗೌಡ, ಹೈರಿಗೆ. ಎಚ್. ಡಿ.ಕೋಟೆ ತಾಲ್ಲೂಕು





