ಎಚ್.ಡಿ.ಕೋಟೆ ತಾಲ್ಲೂಕಿನ ಆರ್‌ಪಿ ಸರ್ಕಲ್‌ನಲ್ಲಿ ಕೊಳಚೆ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು, ದುರ್ವಾಸನೆಯಿಂದಾಗಿ ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವುದು ಅನಿವಾರ್ಯವಾಗಿದೆ. ಈ ಸರ್ಕಲ್‌ನಲ್ಲಿ ಪ್ರತಿ ಭಾನುವಾರ ದನಗಳ ಸಂತೆ ನಡೆಯುತ್ತದೆ.
ಕಬಿನಿ ಜಲಾಶಯ, ತಾರಕ ಜಲಾಶಯ, ನುಗು ಜಲಾಶಯ ಹಾಗೂ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಣೆ ಮಾಡಲು ಪ್ರವಾಸಿಗರು ಈ ಸರ್ಕಲ್ ಮೂಲಕವೇ ಪ್ರಯಾಣಿಸುತ್ತಾರೆ. ಹೀಗೆ ಬರುವ ಅವರೆಲ್ಲರಿಗೂ ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು ಹಾಗೂ ದುರ್ನಾತದ ಅನುಭವವಾಗುತ್ತಿದೆ. ಎಚ್.ಡಿ.ಕೋಟೆ ಪುರಸಭೆಯವರು ಕೂಡಲೇ ರಸ್ತೆಯ ಮೇಲೆ ಹರಿಯುವ ಕೊಳಚೆ ನೀರು ಹರಿಯುವುದನ್ನು ತಡೆಗಟ್ಟಿ ಸಾರ್ವಜನಿಕರ ಹಿತ ಕಾಪಾಡಬೇಕಾಗಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ. ಕೋಟೆ ತಾ.





