ಮಾಜಿ ಸಂಸದ ಪ್ರಜ್ವಲ್ ರೇವಣ್ಣನಿಗೆ ಅತ್ಯಾಚಾರ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದ್ದು, ಅಪರಾಧ ವೆಸಗಿ ಹಣಬಲ, ಶ್ರೀಮಂತಿಕೆ, ರಾಜಕೀಯ ಪ್ರಭಾವದಿಂದ ಕಾನೂನು ಕುಣಿಕೆಯಿಂದ ಪಾರಾಗಬಹುದು ಎಂಬ ಭ್ರಮೆಯಲ್ಲಿದ್ದವರಿಗೆ ತಕ್ಕ ಪಾಠ ಕಲಿಸಿದೆ.
ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಐಪಿಸಿ ೨೦೧, ೩೫೪ ಎ, ೩೫೪ ಬಿ, ೩೫೪ ಸಿ, ೩೭೬-೨-ಕೆ, ೩೭೬-೨-ಎನ್, ೫೦೬, ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ಮಾಡಿ ಈ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿ ಜೀವಾವಧಿ ಶಿಕ್ಷೆ ವಿಧಿಸಿ ಕಾನೂನು ಚೌಕಟ್ಟಿನಿಂದ ಯಾರೂ ಹೊರತಲ್ಲ ಎಂಬ ಸಂದೇಶ ಸಾರಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು





