Mysore
24
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಓದುಗರ ಪತ್ರ: ಅಧಿಕಾರ ಶಾಶ್ವತ ಅಲ್ಲ, ರಾಜಕಾರಣಿಗಳು ಅರ್ಥೈಸಿಕೊಳ್ಳಲಿ

ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಒಂದು ವೇಳೆ ಸರ್ಕಾರ ನಡೆಸುವ ಪಕ್ಷ ಬದಲಾದರೆ, ಗ್ಯಾರಂಟಿ ಯೋಜನೆಗಳನ್ನು ರದ್ದು ಪಡಿಸಬಹುದು. ಜನರ ಆರ್ಥಿಕ ಸ್ಥಿತಿ ಬಲಗೊಳಿಸುವ ನಿಟ್ಟಿನಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದು ಸರ್ಕಾರದ ಮೂಲ ಉದ್ದೇಶ. ಜನರ ಆರ್ಥಿಕ ಸ್ಥಿತಿ ಸುಧಾರಿಸಿದ ನಂತರ ಯೋಜನೆಗಳನ್ನು ನಿಲ್ಲಿಸ ಬಹುದು. ಹಿಂದಿನ ಸರ್ಕಾರಗಳು ಘೋಷಿಸಿದ್ದ ಕಲ್ಯಾಣ ಕಾರ್ಯಕ್ರಮ ಗಳು ಗೊತ್ತು ಗುರಿ ಇಲ್ಲದೆ ರದ್ದುಗೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಅಧಿಕಾರ ಶಾಶ್ವತ ಅಲ್ಲ ಎಂಬು ದನ್ನು ರಾಜಕಾರಣಿಗಳು ಮನವರಿಕೆ ಮಾಡಿಕೊಳ್ಳ ಬೇಕು. ಅಧಿಕಾರದಲ್ಲಿ ಇದ್ದಷ್ಟು ದಿನ ಜನರಿಗೆ ಉತ್ತಮ ಸೇವೆ ನೀಡಬೇಕು. ಆಡಳಿತ ಉತ್ತಮವಾಗಿದ್ದರೆ ಜನರು ಮರು ಆಯ್ಕೆ ಮಾಡುತ್ತಾರೆ. ದೇಶದ ಕೆಲವು ರಾಜ್ಯಗಳಲ್ಲಿ ಆಡಳಿತ ನಡೆಸುತ್ತಿರುವ ಸರ್ಕಾರ ಗಳಿಗೆ ಪೂರ್ಣ ಪ್ರಮಾಣದ ಬಹುಮತವಿಲ್ಲ.

ಮಿತ್ರ ಪಕ್ಷಗಳ ಬೆಂಬಲ ದಿಂದ ಅಧಿಕಾರ ನಡೆಸುತ್ತಿವೆ. ಆಳುವ ಸರ್ಕಾರಗಳು ಜನ ವಿರೋಽ ನಿರ್ಧಾರಗಳನ್ನು ತೆಗೆದುಕೊಂಡರೆ ಜನರೇ ಅವರಿಗೆ ತಕ್ಕ ಶಾಸಿ ಮಾಡುತ್ತಾರೆ.

 – ವೀರೇಶ ಧೂಪದಮಠ,ಮೈಸೂರು.

 

 

Tags:
error: Content is protected !!