Mysore
21
mist

Social Media

ಭಾನುವಾರ, 11 ಜನವರಿ 2026
Light
Dark

ಓದುಗರ ಪತ್ರ: ರಾಜಕಾರಣಿಗಳು ಜವಾಬ್ದಾರಿಯಿಂದ ವರ್ತಿಸಲಿ

ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ನಡೆಯುವುದು ೨೦೨೮ ಏಪ್ರಿಲ್/ಮೇ ತಿಂಗಳಲ್ಲಿ, ಅಂದರೆ ಸುಮಾರು, ಇನ್ನು ಎರಡೂವರೆ ವರ್ಷಗಳ ಬಳಿಕ. ಆದರೆ ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಈಗಾಗಲೇ ಬಿಜೆಪಿ ಟಿಕೆಟ್‌ಗೆ ಲೋಕಸಭಾ ಮಾಜಿ ಸದಸ್ಯ ಮತ್ತು ಮಾಜಿ ಶಾಸಕರ ಜಗಳ ಮಾಧ್ಯಮಗಳ ಮೂಲಕ ಬೀದಿಗೆ ಬಂದಿದೆ. ಇದು ಇಬ್ಬರಿಗೂ ಗೌರವ ತರುವ ವಿಷಯವಲ್ಲ. ಕಳೆದ ೨೦ ವರ್ಷಗಳ ಕಾಲ ಬಿಜೆಪಿ ವಶದಲ್ಲಿದ್ದ ಈ ಕ್ಷೇತ್ರವು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಾಲಾಗಿದೆ. ಈ ಕ್ಷೇತ್ರ ಬಿಜೆಪಿಗೆ ಆಶಾದಾಯಕವಾಗಿದೆ ಎಂದು ಭಾವಿಸಿ ಇಬ್ಬರೂ ಮಾಜಿ ಅನುಭವಿ ರಾಜಕಾರಣಿಗಳು ಈಗಲೇ ಈ ಕ್ಷೇತ್ರದ ಟಿಕೆಟ್ ಆಕಾಕ್ಷಿಗಳಾಗಿರುವುದು ಸರಿಯಷ್ಟೆ. ಕ್ಷೇತ್ರದಿಂದ ಸ್ಪರ್ಧಿಸುವವರನ್ನು ಪಕ್ಷದ ವರಿಷ್ಠರೇ ಆಯ್ಕೆ ಮಾಡುತ್ತಾರೆ. ತಮಗೆ ಟಿಕೆಟ್ ನೀಡಬೇಕು ಎಂದು ಪಕ್ಷದ ವರಿಷ್ಠರಿಗೆ ಮನವಿ ಸಲ್ಲಿಸಬೇಕೇ ಹೊರತು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದು ಅವರ ಘನತೆಗೆ ತಕ್ಕುದಲ್ಲ.

 – ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

Tags:
error: Content is protected !!