‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ ಮಳೆ ಸುರಿಸಿ ಹಗುರಾದ ಮುಗಿಲಿನಂತೆ’ ಎಂದು ಹೇಳಿದ ಭಾವಯಾನದ ಕವಿ ಎಚ್. ಎಸ್.ವೆಂಕಟೇಶ್ ಮೂರ್ತಿ (ಎಚ್ಚೆಸ್ವಿ) ಅವರ ನಿಧನ, ಕನ್ನಡಿಗರಿಗೆ ತುಂಬಲಾರದ ನಷ್ಟ.
ಅವರ ಭಾವಗೀತೆಗಳಾದ ‘ಪ್ರೀತಿ ಕೊಟ್ಟ ರಾಧೆಗೆ’, ‘ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲ್ಲಮ್ಮ’, ‘ಲೋಕದ ಕಣ್ಣಿಗೆ ರಾಧೆಯು ಕೂಡ’, ‘ಇಷ್ಟುಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ’ ಹಾಗೂ ‘ತೂಗು ಮಂಚ’ ಹಾಡುಗಳನ್ನು ಕೇಳದ ಕನ್ನಡಿಗರೇ ಇಲ್ಲ ಎನ್ನಬಹುದು.
೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಎಚ್ಚೆಸ್ವಿ ಅವರು ಕನ್ನಡಕ್ಕೆ ನೀಡಿದ ಕೊಡುಗೆಯನ್ನು ಎಂದಿಗೂ ಮರೆಯುವುದಕ್ಕೆ ಸಾಧ್ಯವಿಲ್ಲ.
-ಬೆಸಗರಹಳ್ಳಿ ರವಿಪ್ರಸಾದ್, ಮೈಸೂರು





