ಪುರುಷನುದ್ಧಾರದ ಪರಮೇಶ್ವರಿ!
ಪುರುಷನುದ್ಧಾರದ ಪರಮೇಶ್ವರಿ!
ಹೆಣ್ಣಂದರೇನು ಬರಿ ಭೋಗವಸ್ತುವೇ!
ಗಂಡುಕುಲಕೇ ಅವಮರ್ಯಾದೆ
ವಿನಾಶಕೆ ನಾಂದಿ
ಅವಳ ಮೇಲಿನ ಆಕ್ರಮಣ ಅತ್ಯಾಚಾರ!
ಮರೆತು ಹೋಯಿತೆ
ಕೀಚಕ ದುರ್ಯೋಧನಾದಿಗಳ ಕತೆ!
ಮಾತೆ ಸತಿ ಸುತೆಯಾಗಿ
ರಕ್ಷಿಪ ದಿವ್ಯ ಶಕ್ತಿ ಕಣಾ!
ಪುರುಷನುದ್ಧಾರದ ಪರಮೇಶ್ವರಿ ಕಣಾ!
– ಸಿ.ಪಿ.ಸಿದ್ಧಾಶ್ರಮ, ವಿಜಯನಗರ ೩ನೇ ಹಂತ , ಮೈಸೂರು





