ಮೈಸೂರು ನಗರದ ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಮತ್ತು ಹಿರಿಯ ನಾಗರಿಕರಿಗೆ ಹಾಗೂ ಮುಖ್ಯವಾಗಿ ವಿಶೇಷ ಚೇತನರಿಗೆ ಅನುಕೂಲ ಕಲ್ಪಿಸಲು ‘ಎಸ್ಕಲೇಟರ್’ ಅಳವಡಿಸಲಾಗಿದೆ. ಆದರೆ ಎಸ್ಕಲೇಟರ್ ಸರಿಯಾಗಿ ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿಲ್ಲ. ಈ ಬಗ್ಗೆ ಅಲ್ಲಿನ ಸಿಬ್ಬಂದಿಯನ್ನು ವಿಚಾರಿಸಿದರೆ ಇದರ ನಿರ್ವಹಣೆ ನೋಡಿಕೊಳ್ಳುವವರು ಕೆಲವೊಮ್ಮೆ ಈ ಎಸ್ಕಲೇಟರ್ ಗಳಿಗೆ ಬೀಗ ಹಾಕಿಕೊಂಡು ಹೋಗುತ್ತಾರೆ.
ನಾವೇನೂ ಮಾಡಲು ಸಾಧ್ಯವಿಲ್ಲ, ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿ ಸುತ್ತಾರೆ. ದಯಮಾಡಿ ಇದನ್ನು ರೈಲ್ವೆಯ ಹಿರಿಯ ಅಧಿಕಾರಿಗಳು ಗಮನಿಸಿ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರಂನಲ್ಲಿರುವ ಈ ಎಸ್ಕಲೇಟರ್ ನಿಂದಲೇ, ಉಳಿದೆಲ್ಲಾ ಪ್ಲಾಟ್ ಫಾರಂಗೆ ಹೋಗುವ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ ಮೈಸೂರು