೨೦೨೪ನೇ ವರ್ಷ ಮುಗಿದು ೨೦೨೫ನೇ ವರ್ಷ ಬರುತ್ತಿದೆ. ಮೈಸೂರಿನಲ್ಲಿ ಹೊಸ ವರ್ಷದ ಹಿಂದಿನ ದಿನ ಮೈಸೂರಿನ ಪ್ರವಾಸಿ ಸ್ಥಳಗಳಿಗೆ ಬಿಗಿ ಭದ್ರತೆಗೋಸ್ಕರ ಹೆಚ್ಚಿನ ಪೊಲೀಸರನ್ನು ನಿಯೋಜಿಸಬೇಕು. ಹೌದು ಕಳೆದ ವರ್ಷ ಮೈಸೂರಿನ ಹಲವು ಕಡೆ ಪುಂಡರು ಮದ್ಯಪಾನ ಮಾಡಿ ಪುಂಡಾಟ ನಡೆಸಿದ ಬಗ್ಗೆ ಕೆಲ ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗಿತ್ತು. ಈ ವರ್ಷ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಪ್ರಯುಕ್ತ ಮೈಸೂರಿಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆ ಇರುವುದರಿಂದ ಮೈಸೂರು ನಗರದಲ್ಲಿ ಯಾವುದೇ ತೊಂದರೆಗಳು ಆಗದಂತೆ ಹೆಚ್ಚುವರಿ ಪೊಲೀಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ನಗರದ ಅರಮನೆ, ಸೇಂಟ್ ಫಿಲೋಮಿನಾ ಚರ್ಚ್, ಚಾಮುಂಡಿ ಬೆಟ್ಟ ಮುಂತಾದ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಬಿಗಿ ಭದ್ರತೆ ಒದಗಿಸಬೇಕು. ಹೊಸ ವರ್ಷ ಮತ್ತು ಹೊಸ ವರ್ಷದ ಹಿಂದಿನ ರಾತ್ರಿ ಪೊಲೀಸರು ಹೆಚ್ಚು ಗಸ್ತು ತಿರುಗಬೇಕು. ಈ ಬಗ್ಗೆ ಯಾವುದೇ ತೊಂದರೆಗಳು ಆಗದಂತೆ ಭದ್ರತೆ ಕಲ್ಪಿಸಲು ನಗರ ಪೊಲೀಸ್ ಆಯುಕ್ತರು ಕ್ರಮ ವಹಿಸಬೇಕು.
-ಸಿ.ಎನ್.ಅಭಿಷೇಕ್, ಮೈಸೂರು.





