‘ಪ್ರಜಾಪ್ರಭುತ್ವ ಬೇಡ, ಅರಸೊತ್ತಿಗೆ ಬೇಕು, ಜಾತ್ಯತೀತ ರಾಷ್ಟ್ರಬೇಡ, ಹಿಂದೂ ರಾಷ್ಟ್ರಬೇಕು’ ಎನ್ನುವ ಹೋರಾಟ ನೇಪಾಳದಲ್ಲಿ ತೀವ್ರವಾಗುತ್ತಿದ್ದು, ೧೬ ವರ್ಷಗಳಲ್ಲಿ ೧೪ ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ನೋಡಿ ರೋಸಿ ಹೋದ ಜನತೆ ಅರಸರ ಆಳ್ವಿಕೆಯಲ್ಲೇ ದೇಶ ಮುನ್ನಡೆಯಲಿ ಎಂದು ಹೋರಾಟಕ್ಕಿಳಿದಿದ್ದಾರೆ. ನಾವು ಪ್ರಜಾಪ್ರಭುತ್ವಕ್ಕೆ ಅರ್ಹರಲ್ಲ, ಪ್ರಜಾಪ್ರಭುತ್ವದ ಓವರ್ ಡೋಸ್ ದೇಶವನ್ನು ನಾಶಪಡಿಸುತ್ತಿದೆ, ರಾಜಕೀಯ ಅಸ್ಥಿರತೆಯಿಂದ ದೇಶದ ಅಭಿವೃದ್ಧಿ ನಿಂತ ನೀರಾಗಿದೆ ಎಂದು ಜನತೆ ಧ್ವನಿ ಎತ್ತಿದ್ದು, ಅವರ ಮನಸ್ಥಿತಿ ಹಳೆ ಗಂಡನ ಪಾದವೇ ಲೇಸು ಎನ್ನುವಂತಾಗಿದೆ. ಭಾರತದಲ್ಲೂ ಕೆಲವು ರಾಜ್ಯಗಳಲ್ಲಿನ ರಾಜಕೀಯ ಅಸ್ಥಿರತೆ ಮತ್ತು ಆಡಳಿತ ವೈಖರಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಇಲ್ಲೂ ಅಂತಹದೇ ಪರಿಸ್ಥಿತಿ ಎದುರಾಗಬಹುದು ಅನಿಸುತ್ತದೆ.
–ರಮಾನಂದ ಶರ್ಮಾ, ಬೆಂಗಳೂರು





