Mysore
22
overcast clouds

Social Media

ಶನಿವಾರ, 03 ಜನವರಿ 2026
Light
Dark

ಓದುಗರ ಪತ್ರ: ನಿರ್ಲಕ್ಷ್ಯಕ್ಕೆ ಒಳಗಾದ ಬ್ಯಾರಿಕೇಡ್‌ಗಳು

ಓದುಗರ ಪತ್ರ

ಸಾಂಸ್ಕ ತಿಕ ನಗರಿ ಮೈಸೂರಿನಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬ್ಯಾರಿಕೇಡ್‌ಗಳು ಬಳಕೆಯಾದ ನಂತರ ನಿರ್ಲಕ್ಷ್ಯಕ್ಕೆ ಒಳಪಡುತ್ತಿವೆ. ಅವುಗಳನ್ನು ಸುರಕ್ಷಿತವಾಗಿ ಒಂದೆಡೆ ಇರಿಸುವ ಬದಲು ಎಲ್ಲೆಂದರಲ್ಲಿ ಬೀಸಾಡಿ ಅಸಡ್ಡೆ ತೋರಲಾಗುತ್ತಿದೆ. ಮೈಸೂರಿನ ಕುವೆಂಪುನಗರ ವಿಶ್ವ ಮಾನವ ಜೋಡಿ ರಸ್ತೆಯ ( ಲೊಬೋಸ್ ಬಾರ್ ಅಂಡ್ ರೆಸ್ಟೋರೆಂಟ್) ಮಧ್ಯೆ ಇರುವ ಮರ ಗಿಡಗಳ ಮಧ್ಯೆ ಬ್ಯಾರಿಕೇಡ್‌ಗಳು ಬೇಕಾಬಿಟ್ಟಿಯಾಗಿ ಬಿದ್ದಿವೆ. ೨೦೨೫ರ ದಸರಾ ಮಹೋತ್ಸವ ಅಂಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆದ ಯುವ ಸಂಭ್ರಮ ಕಾರ್ಯ ಕ್ರಮದ ವೇಳೆ ಬಳಸಲಾದ ಬ್ಯಾರಿಕೇಡ್‌ಗಳು ಇಂದಿಗೂ ಮೈಸೂರು ವಿವಿ ವಾಣಿಜ್ಯ ಶಾಸ್ತ್ರ ಅಧ್ಯಯನ ವಿಭಾಗದ ಹಿಂದಿರುವ ಪೋಸ್ಟ್ ಆಫೀಸ್ ಮುಂದಿನ ರಸ್ತೆಯಲ್ಲಿ ಅನಾಥವಾಗಿ ಬಿದ್ದಿವೆ. ಕುವೆಂಪು ಸ್ಮಾರಕ ಇರುವ ಮುಖ್ಯ ದ್ವಾರದ ಬಳಿ ಮೋರಿಯ ಪಕ್ಕದಲ್ಲಿ ಕೂಡ ಬ್ಯಾರಿಕೇಡ್‌ಗಳು ಬಿದ್ದು ತುಕ್ಕು ಹಿಡಿಯುತ್ತಿವೆ. ಈ ಬ್ಯಾರಿಕೇಡ್‌ಗಳನ್ನು ಬ್ಯಾಂಕ್‌ಗಳು, ರೋಟರಿ,ಲಯನ್ಸ್ ಕ್ಲಬ್ ಮುಂತಾದ ಅನೇಕ ಸೇವಾ ಸಂಸ್ಥೆಗಳು ಸಾರ್ವಜನಿಕ ಹಿತಾಸಕ್ತಿಗೆ ಬಳಕೆಯಾಗಲಿ ಎಂಬ ಸದುದ್ದೇಶದಿಂದ ಕೊಡುಗೆಯಾಗಿ ನೀಡಿರುತ್ತವೆ. ಅದಕ್ಕೆ ಸಾಕಷ್ಟು ಹಣ ಖರ್ಚಾಗಿರುತ್ತದೆ ಅಲ್ಲವೆ? ಆದ್ದರಿಂದ ಮೈಸೂರು ನಗರದ ಅನೇಕ ರಸ್ತೆಗಳ ಬದಿಯಲ್ಲಿ ಬಳಕೆಯಾದ ನಂತರ ಅನಾಥವಾಗಿ ಬಿದ್ದಿರುವ ಬ್ಯಾರಿಕೇಡ್‌ಗಳನ್ನು ಸುರಕ್ಷಿತವಾಗಿ ಇರಿಸಲು ಮೈಸೂರು ನಗರ ಪೊಲೀಸ್ ಅಧಿಕಾರಿಗಳು ಸಂಬಂಧಪಟ್ಟ ಪೊಲೀಸ್ ಠಾಣೆಗಳಿಗೆ ಸೂಚಿಸಬೇಕಿದೆ.

-ನಾಗೇಶ್, ಮಾನಸಗಂಗೋತ್ರಿ, ಮೈಸೂರು

 

Tags:
error: Content is protected !!