ರೈಲ್ವೆ ಇಲಾಖೆಯ ಕನ್ನಡ ವಿರೋಧಿ ನೀತಿ ಇನ್ನೊಮ್ಮೆ ಬಯಲಾಗಿದೆ. ನೇಮಕಾತಿ ಮತ್ತು ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಪರೀಕ್ಷೆ ನಡೆಸುವುದಾಗಿ ಭರವಸೆ ನೀಡಿ ಕೊನೆಗಳಿಗೆಯಲ್ಲಿ ಅದನ್ನು ರದ್ದುಮಾಡಿರುವುದು ಈ ಆರೋಪವನ್ನು ದೃಢೀಕರಿಸಿದೆ.
ಈ ನಿಟ್ಟಿನಲ್ಲಿ ಕನ್ನಡ ಹೋರಾಟಗಾರರು ಎಂದಿನಂತೆ ಬೀದಿಗಿಳಿದಿದ್ದು, ರೈಲ್ವೆ ಇಲಾಖೆ ತನ್ನ ಕನ್ನಡ ವಿರೋಧಿ ನಿಲುವನ್ನು ಬದಲಿಸುವಂತೆ, ಕೈಬಿಡುವಂತೆ ಮಾಡಿದ್ದಾರೆ. ಜನಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರ ಮುಂದಾಗಿ ಮಾಡಬೇಕಾದ ಕಾರ್ಯವನ್ನು ಕನ್ನಡಪರ ಸಂಘಟನೆಗಳು ಮತ್ತು ಹೋರಾಟಗಾರರು ಮಾಡಿದ್ದಾರೆ.
– ಎಸ್.ರಮಾನಂದ, ಬೆಂಗಳೂರು





