ರಾಜ್ಯದ ಹತ್ತು ನಗರ ಪಾಲಿಕೆಗಳಿಗೆ ಮೇಯರ್ ಮತ್ತು ಉಪ ಮೇಯರ್ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಎಲ್ಲ ನಗರ ಪಾಲಿಕೆ ಗಳಿಗೂ ಚುನಾವಣೆ ಯಾವಾಗ ನಡೆಯುತ್ತದೆ ಎಂಬುದೇ ತಿಳಿದಿಲ್ಲ. ಅಲ್ಲದೆ ಸದ್ಯಕ್ಕೆ ಚುನಾವಣೆ ನಡೆಸುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ. ಒಂದು ವೇಳೆ ಚುನಾವಣೆ ನಡೆದರೂ ಮೇಯರ್ ಮತ್ತು ಉಪ ಮೇಯರ್‌ಗಳು ಆಯ್ಕೆಯಾಗಲು ಕನಿಷ್ಠವೆಂದರೂ 6-7 ತಿಂಗಳುಗಳಾದರೂ ಬೇಕು.
ಹೀಗಿರುವಾಗ ರಾಜ್ಯ ಸರ್ಕಾರಕ್ಕೆ ತರಾತುರಿಯಲ್ಲಿ ಮೇಯರ್ ಮತ್ತು ಉಪಮೇಯರ್ ಸ್ಥಾನಗಳ ಮೀಸಲಾತಿ ಪಟ್ಟಿಯನ್ನು ಪ್ರಕಟಿಸುವ ಅನಿ ವಾರ್ಯವೇನಿತ್ತು? ಎಂಬ ಪ್ರಶ್ನೆ ಮೂಡಿದ್ದು, ಇದರಲ್ಲಿ ರಾಜಕೀಯ ಉದ್ದೇಶ ವಿರಬಹುದು ಎಂಬ ಅನುಮಾನ ಕಾಡುತ್ತಿದೆ. ಚುನಾವಣೆಗೆ ಇನ್ನೂ ಸಾಕಷ್ಟು ತಿಂಗಳುಗಳು ಬಾಕಿ ಇರುವಾಗಲೇ ಮೀಸಲಾಯಿತಿಯನ್ನು ಪ್ರಕಟಿಸಿರುವುದರಿಂದ ಜನರು ಗೊಂದಲಕ್ಕೀಡಾಗಿದ್ದು, ಇದು ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರ ವಿರಬಹುದೇನೋ ಅನಿಸುತ್ತದೆ.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.