Mysore
14
overcast clouds

Social Media

ಶುಕ್ರವಾರ, 19 ಡಿಸೆಂಬರ್ 2025
Light
Dark

ಓದುಗರ ಪತ್ರ: ಮೈಸೂರು ಸ್ವಚ್ಛನಗರ; ಪೌರ ಕಾರ್ಮಿಕರ ಶ್ರಮಕ್ಕೆ ಸಿಕ್ಕ ಗೌರವ

ಓದುಗರ ಪತ್ರ

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆ ನಗರಗಳ ಪಟ್ಟಿ ಪ್ರಕಟಗೊಂಡಿದ್ದು, ಈ ಬಾರಿ ಮೈಸೂರು ನಗರವು ಮೂರನೇ ಸ್ಥಾನ ಪಡೆದಿರುವುದು ಸಂತಸದ ಸಂಗತಿಯಾಗಿದೆ. ೨೦೧೫ರಲ್ಲಿ ಮೈಸೂರು ನಗರ ಸ್ವಚ್ಛತೆಯಲ್ಲಿ ಮೊದಲ ಸ್ಥಾನ ಪಡೆದಿತ್ತು. ಆದರೆ ೨೦೨೩ರಲ್ಲಿ ೨೭ನೇ ಸ್ಥಾನ ಪಡೆದು ನಿರಾಸೆ ಮೂಡಿಸಿತ್ತು. ಈ ಹಿನ್ನೆಲೆಯಲ್ಲಿ ಮೈಸೂರನ್ನು ಸ್ವಚ್ಛತೆಯಲ್ಲಿ ಮತ್ತೆ ಮೊದಲ ಸ್ಥಾನಕ್ಕೆ ತರಬೇಕು ಎಂಬ ನಿಟ್ಟಿನಲ್ಲಿ ಮೈಸೂರು ನಗರಪಾಲಿಕೆ ಅಧಿಕಾರಿಗಳು ಹಾಗೂ ಪೌರಕಾರ್ಮಿಕರು

ಶ್ರಮಿಸಿದ ಫಲವಾಗಿ ಈ ಸಾಲಿನಲ್ಲಿ ಮೈಸೂರು ನಗರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಪ್ರಥಮ ಸ್ಥಾನವನ್ನು ಇಂದೋರ್ ಪಡೆದಿದ್ದು, ಸ್ವಚ್ಛ ಸರ್ವೇಕ್ಷಣೆಯಲ್ಲಿ ಪ್ರಮುಖ ೧೦ ನಗರಗಳಲ್ಲಿ ಮೈಸೂರು ನಗರ ಇರುವುದು ಹೆಮ್ಮೆಯ ವಿಷಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರು ನಗರದ ಹೊರ ಭಾಗದಲ್ಲಿ ಸಾರ್ವಜನಿಕರು ಕಸವನ್ನು ಸುರಿಯುತ್ತಿದ್ದು, ವಾತಾವರಣ ಹಾಳಾಗುತ್ತಿದೆ. ಮಹಾನಗರ ಪಾಲಿಕೆಯವರು ಕೂಡಲೇ ಎಲ್ಲೆಂದರಲ್ಲಿ ಕಸ ಸುರಿಯದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು ಹಾಗೂ ನಿರ್ಲಕ್ಷ್ಯ ವಹಿಸುವವರಿಗೆ ದಂಡವನ್ನು ವಿಧಿಸಬೇಕು. ಪೌರಕಾರ್ಮಿಕರ ಪರಿಶ್ರಮದಿಂದಲೇ ಇಂದು ಮೈಸೂರು ನಗರ ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಮೂರನೇ ಸ್ಥಾನ ಪಡೆದಿದೆ. ಪೌರ ಕಾರ್ಮಿಕರಿಗೆ ಮತ್ತು ನಗರ ಪಾಲಿಕೆ ಆಯುಕ್ತರು,ಅಧಿಕಾರಿಗಳು, ನೌಕರರಿಗೆ ಮೈಸೂರು ಜನತೆಯ ಪರವಾಗಿ ಹೃದಯ ಪೂರ್ವಕ ಅಭಿನಂದನೆಗಳು.

– ನಾಗೇಶ್, ಮಾನಸಗಂಗೋತ್ರಿ, ಮೈಸೂರು

Tags:
error: Content is protected !!