Mysore
31
scattered clouds

Social Media

ಮಂಗಳವಾರ, 31 ಮಾರ್ಚ್ 2026
Light
Dark

ಓದುಗರ ಪತ್ರ: ಶಾಸಕ ದರ್ಶನ್ ಮಾದರಿ ನಡೆ

ಓದುಗರ ಪತ್ರ

ಜನರಿಂದ ಚುನಾಯಿತರಾದ ಜನಪ್ರತಿನಿಧಿಗೆ ತನ್ನ ಕ್ಷೇತ್ರಕ್ಕೆ ಮಾಡಬೇಕಾಗಿರುವ ಯೋಜನೆಗಳ ಬಗ್ಗೆ ಸಾಕಷ್ಟು ಒಲವಿರಬೇಕು ಹಾಗೂ ಬದ್ಧತೆ ಇರಬೇಕು ಎನ್ನುವುದಕ್ಕೆ ತಮಗೆ ಸಿಕ್ಕ ಅಮೂಲ್ಯ ಅವಕಾಶವನ್ನು ಸದ್ವಿನಿಯೋಗ ಮಾಡಿಕೊಂಡು ಜನಪರ ಸೇವೆ ಮಾಡುತ್ತಿರುವ ದರ್ಶನ್ ಧ್ರುವನಾರಾಯಣ ಅವರು ಉತ್ತಮ ಉದಾಹರಣೆ..!

ಪ್ರಾಚೀನ ಹಾಗೂ ಐತಿಹಾಸಿಕ ಹಿನ್ನೆಲೆಯುಳ್ಳ ನಂಜನಗೂಡು ಪಟ್ಟಣದ ಮೂಲ ಹೆಸರು ಗರಳಪುರಿ. ಇತಿಹಾಸದ ಪುಟವನ್ನು ಈಗ ತೆರೆದು ಸಂಭ್ರಮಿಸಿತು. ಇದರ ಹಿಂದಿನ ಕರ್ತೃ ಸ್ಥಳೀಯ ಶಾಸಕರು.ಇವರ ಅಪಾರ ಇಚ್ಛಾಶಕ್ತಿ, ಪ್ರತ್ಯೇಕವಾದ ಚಿಂತನೆ ಯಿಂದಾಗಿ ಸಾಂಸ್ಕೃತಿಕ ಕಲಾವೈಭವದ ಮೆರುಗು ಗರಳಪುರಿ ಉತ್ಸವ ಇತಿಹಾಸ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮೀ ಜತ್ರಾ ಮಹೋತ್ಸವದ ಪ್ರಯುಕ್ತ.. ಇದೇ ಮೊದಲ ಬಾರಿಗೆ ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಆರಂಭ ವಾಗುವ ಮುಖೇನ ಹೊಸ ರೂಪ ಪಡೆದಿದೆ. ಈ ಕ್ಷೇತ್ರದ ಅವಲೋಕನ ಮಾಡಿದರೆ,ಬಹುಶಃ ಈ ಹಿಂದಿನ ಅವಧಿಗಳಲ್ಲಿ ನಂಜನಗೂಡಿನ ಶಾಸಕರಾಗಿದ್ದವರು, ಮಂತ್ರಿಗಳಾಗಿದ್ದವರು, ಯಾರೂ ಕೂಡ ಯೋಚಿಸದ ವಿಭಿನ್ನ ಮಾದರಿಯಲ್ಲಿ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಮೂಲಕ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿಯ ಪಂಚರಥೋತ್ಸವಕ್ಕೆ ಭಕ್ತಿ, ಪರಂಪರೆ, ವೈಭವದ ಹೊಸ ಮೆರುಗು ತಂದ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ.

ಸುಮಾರು ೯ ದಿನಗಳ ಕಾಲ ಪಟ್ಟಣದಲ್ಲಿ ನಡೆದ ೧೫ ಕ್ಕೂ ಹೆಚ್ಚು ಸ್ಪರ್ಧೆಗಳು ಕಲಾ ರಸಿಕರನ್ನು ತನ್ನತ್ತ ಕೈ ಬೀಸಿ ಆಕರ್ಷಿಸಿತು. ಇಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಿಗೆ ರಾಜ್ಯದ ಹಲವಾರು ಜಿಗಳ ಸಾಕಷ್ಟು ಸ್ಪರ್ಧಾ ಆಕಾಂಕ್ಷಿಗಳು ಆಗಮಿಸಿ ಭಾಗವಹಿಸಿ ಹರ್ಷ ವ್ಯಕ್ತಪಡಿಸಿದರು. ಉತ್ಸವದ ಸಮಾರೋಪ ಸಮಾರಂಭಕ್ಕೆ ನಾಡಿನ ಖ್ಯಾತ ಚಲನಚಿತ್ರ ತಾರೆಯರು ಆಗಮಿಸುವ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ರಂಗು ಹೆಚ್ಚಿಸಿದರು.

ಮೈಸೂರು ದಸರಾ, ಕನಕಪುರದ ಕನ ಕೋತ್ಸವ, ಬೆಂಗಳೂರಿನ ಕರಗ ಉತ್ಸವ, ಐತಿಹಾಸಿಕ ಹಂಪಿ ಉತ್ಸವ, ಕರಾವಳಿಯ ಕಂಬಳ, ಪಟ್ಟದಕಲ್ಲು ನೃತ್ಯೋತ್ಸವ, ದಕ್ಷಿಣ ಕನ್ನಡ ಜಿಯ ಕಂಬಳ, ಇದೇ ಸಾಲಿಗೆ ಸದ್ಯ ನಂಜನಗೂಡಿನಲ್ಲಿ ನಡೆದ ಗರಳಪುರಿ ಉತ್ಸವ ತನ್ಮೂಲಕ ರಾಜ್ಯದ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಗ್ರಾಮೀಣ ಕಲೆಗಳನ್ನು ಪ್ರತಿಬಿಂಬಿಸುತ್ತ ಇತಿಹಾಸದ ಪುಟ ಸೇರುತ್ತಿದೆ. ಸರ್ವರ ಸಾಮರಸ್ಯದ ಬೀಡಾದ ನಂಜನಗೂಡಿನಲ್ಲಿ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಿದೆ. ಶಾಸಕ ದರ್ಶನ್ ಧ್ರುವನಾರಾಯಣ್ ತಮ್ಮ ತಂದೆ ಮಾಜಿ ಸಂಸದ ಅಭಿವೃದ್ಧಿ ಹರಿಕಾರರಾಗಿದ್ದ ದಿ.ಧ್ರುವನಾರಾಯಣ ಅವರ ಹಾದಿಯಲ್ಲಿ ಉತ್ಸಾಹಿಯಾಗಿ ಮುನ್ನುಗ್ಗುತ್ತಿರುವುದು ಅತ್ಯಂತ ಗೌರವದ ವಿಚಾರ.

 -ಅನಿಲ್ ಕುಮಾರ್, ನಂಜನಗೂಡು

Tags:
error: Content is protected !!