ಹಾಲು… ಜೇನು!
ರಾಜ್ಯದಲ್ಲಿ ಈಗ ಎಲ್ಲೆಲ್ಲೂ
ಹಾಲು-ಜೇನುಗಳದೇ ಸುದ್ದಿ!
ಹಾಗಂತ ರಾಜ್ಯದಲ್ಲಿ ತುಂಬಿ
ತುಳುಕುತ್ತಿಲ್ಲ ಸಮೃದ್ಧಿ!
ಬೆಲೆ ಏರಿಸಿಕೊಂಡ ಹಾಲು
ಗ್ರಾಹಕನ ಪಾಲಿಗಾಗಿದೆ ಹುಳಿ,
ಮಧು ಬಲೆಯಲ್ಲಿ ಸಿಲುಕಿದ
ಗಿರಾಕಿಗಳ ಪಾಲಿಗೆ
ಕಚ್ಚಿದಂತಾಗಿದೆ ಜೇನು!
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು