ನೆರೆಯ ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತ ಮತ್ತು ಭೀಕರ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಸಾವು-ನೋವುಗಳು ಸಂಭವಿಸಿದ್ದು, ಎಲ್ಲರ ಮನಸ್ಸಿನಲ್ಲಿ ಇದೊಂದು ಕಹಿ ಘಟನೆಯಾಗಿ ಉಳಿದಿದೆ.
ಮನುಷ್ಯ ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿಯ ಒಡಲನ್ನು ಬಗೆದಷ್ಟೂ ಪ್ರಕೃತಿ ವಿಕೋಪಗಳು ಹೆಚ್ಚಾಗುತ್ತಿವೆ.
ಕೊಡಗು, ಚಿಕ್ಕಮಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಆಗಾಗ್ಗೆ ಭೂಕುಸಿತಗಳು ಸಂಭವಿಸುವ ಮೂಲಕ ಪ್ರಕೃತಿ ಮನುಷ್ಯನಿಗೆ ಎಚ್ಚರಿಕೆ ನೀಡಿದರೂ ಎಚ್ಚೆತ್ತುಕೊಳ್ಳದೇ ಬೆಟ್ಟ-ಗುಡ್ಡಗಳನ್ನು ಕೊರೆದು ರಸ್ತೆಗಳನ್ನು ನಿರ್ಮಿಸಿದ್ದಲ್ಲದೇ ಕಾಡುಗಳನ್ನು ನಾಶ ಮಾಡಿ ನಗರಗಳನ್ನು ಸೃಷ್ಟಿಸಿದ ಪರಿಣಾಮ ವಯನಾಡಿನಲ್ಲಿ ಸಂಭವಿಸಿದಂತಹ ಮಹಾದುರಂತಗಳು ಸಂಭವಿಸುತ್ತಿವೆ. ಇಂತಹ ಘಟನೆಗಳಿಂದ ನಾವು ಎಚ್ಚೆತ್ತುಕೊಂಡು ಮುಂದಾದರೂ ಪರಿಸರ ಸಂರಕ್ಷಣೆಗೆ ಮುಂದಾಗೋಣ.
-ಅಪುರಾ, ಅಗತಗೌಡನಹಳ್ಳಿ, ಗುಂಡ್ಲುಪೇಟೆ ತಾ.