ಹೊಸ ವರ್ಷ ಎಲ್ಲರಿಗೂ ಹರುಷ ತರಲಿ, ಎಲ್ಲರ ನೋವುಗಳನ್ನು ದೂರ ಮಾಡಲಿ. 2024ರಲ್ಲಿ ಭಾರತ ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ್ದರೂ ಸಾಕಷ್ಟು ಕರಾಳ ಘಟನೆಗಳಿಗೂ ಸಾಕ್ಷಿಯಾಗಿದೆ. ದೇಶದ ನಾನಾ ಭಾಗಗಳಲ್ಲಿ ನಡೆದ ರೈಲು ಅಪಘಾತ ಗಳು ನೂರಾರು ಮಂದಿಯನ್ನು ಬಲಿ ಪಡೆದರೆ, ಕೇರಳದ ವಯನಾಡಿನಲ್ಲಿ ಸಂಭವಿಸಿದ ಭೂ ಕುಸಿತದಿಂದ ಹತ್ತಾರು ಗ್ರಾಮಗಳೇ ಕೊಚ್ಚಿ ಹೋಗಿ, ನೂರಾರು ಮಂದಿ ಜೀವ, ಜೀವನ ಕಳೆದುಕೊಂಡಿದ್ದಾರೆ.
ಉತ್ತರ ಕರ್ನಾಟಕ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಶಿರೂರು ಬಳಿ ಗುಡ್ಡ ಕುಸಿತ ಸಂಭವಿಸಿ ೧೧ ಮಂದಿ ಜೀವ ಕಳೆದುಕೊಂಡರು. ಇದಲ್ಲದೆ ಸತ್ಸಂಗದಲ್ಲಿ ಕಾಲ್ತುಳಿತದ ದುರಂತ, ದಿ ರಾಮೇಶ್ವರಂ ಕೆಫೆ ಸ್ಛೋಟ ಸೇರಿದಂತೆ ಅನೇಕ ಕರಾಳ ಅಧ್ಯಾಯಗಳಿಗೆ 2024 ಸಾಕ್ಷಿಯಾಗಿದೆ.
ಇನ್ನು ರತನ್ ಟಾಟಾ, ಪ. ರಾಜೀವ ತಾರಾನಾಥ್, ಸಂಸದ ವಿ. ಶ್ರೀನಿವಾಸ ಪ್ರಸಾದ್, ಕನ್ನಡದ ಖ್ಯಾತ ನಿರೂಪಕಿ ಅಪರ್ಣ, ಮಾಜಿ ಪ್ರಧಾನಿ ಮನಮೋಹನ ಸಿಂಗ್, ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ, ತಬಲ ವಾದಕ ಜಾಕೀರ್ ಹುಸೇನ್ ರಂತಹ ಮಹನೀಯರು ಇಹಲೋಕ ತ್ಯಜಿಸಿದ್ದಾರೆ. ೨೦೨೪ರಲ್ಲಿ ಕ್ರೀಡೆಯಲ್ಲಿ ಭಾರತ ಅತ್ಯುತ್ತಮ ಸಾಧನೆ ಮಾಡಿದೆ. ಕ್ರಿಕೆಟ್ ಟಿ-20 ವಿಶ್ವಕಪ್ ಚಾಂಪಿಯನ್ ಆಗುವ ಜತೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳು ಅನೇಕ ಪದಕಗಳನ್ನು ಗೆದ್ದು ಬೀಗಿದರು. ಅಲ್ಲದೆ ವಿಶ್ವದ ಅತ್ಯಂತ ಕಿರಿಯ ಚೆಸ್ ಚಾಂಪಿಯನ್‌ಯಾಗಿ ಡಿ. ಗುಕೇಶ್ ಹೊರ ಹೊಮ್ಮಿದ್ದು, ಭಾರತಕ್ಕೆ ಹೆಮ್ಮೆಯ ವಿಚಾರ. ೨೦೨೫ರಲ್ಲಿಯೂ ದೇಶ ಸಾಧನೆಯ ಹಾದಿಯಲ್ಲಿ ಸಾಗಲಿ ಎಂದು ಹಾರೈಸೋಣ.
-ಎಸ್. ಪ್ರಶಾಂತ್, ಅಂತರಸಂತೆ, ಎಚ್. ಡಿ. ಕೋಟೆ ತಾ.





