ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಜಾತಿ ಸಂಘರ್ಷ, ಧರ್ಮ ಸಂಘರ್ಷ, ಜನಾಂಗೀಯ ಸಂಘರ್ಷಗಳು ನಡೆಯುತ್ತಲೇ ಇವೆ. ‘ಸರ್ವ ಜನಾಂಗದ ಶಾಂತಿಯ ತೋಟ’ ವಾಗಿರುವ ಈ ನಮ್ಮ ನಾಡಿಗೆ ಇಂತಹ ಕೆಲವು ಸಂಘರ್ಷಗಳಿಂದ ಕಪ್ಪು ಚುಕ್ಕೆ ಬಿದ್ದಿದೆ. ಕೋಮು ಸಂಘರ್ಷವನ್ನು ನಿವಾರಿಸಿ ಸಮಾಜದಲ್ಲಿ ಶಾಂತಿ ಸ್ಥಾಪಿಸಲು ಸಾಮಾಜಿಕ ಸಂಘಟನೆಗಳ ಹೋರಾಟಗಾರರು, ಪ್ರಗತಿಪರರು, ನಗರಗಳ ಕೇಂದ್ರ ಭಾಗಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಶಾಂತಿ, ಸೌಹಾರ್ದ ಸಭೆ ಹಾಗೂ ಸಮ್ಮೇಳನಗಳು ನಡೆಸಿ ಶಾಂತಿ, ಸೌಹಾರ್ದತೆಯ ಸಂದೇಶವನ್ನು ಸಾರುವ ಮೂಲಕ ಜನರ ಮನದಲ್ಲಿ ಶಾಂತಿಯ ಬೆಳಕನ್ನು ಹರಿಸಲಿ.
– ಪಿ .ಸಿ.ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು




