Mysore
28
few clouds

Social Media

ಬುಧವಾರ, 14 ಜನವರಿ 2026
Light
Dark

ಓದುಗರ ಪತ್ರ: ಮಾದರಿ ಮಹಿಳೆ ಮಂಗಳಮ್ಮ

ಓದುಗರ ಪತ್ರ

ಮಂಡ್ಯದ ಪಾಂಡವಪುರ ತಾಲ್ಲೂಕಿನ ಡಿಂಕ ಗ್ರಾಮದ ಮಹಿಳೆ ಮಂಗಳಮ್ಮ ೨೦೨೫ರ ದಕ್ಷಿಣ ಡೇರಿ ಶೃಂಗ ಸಭೆಯಲ್ಲಿ ಅತ್ಯುತ್ತಮ ಹೈನುಗಾರ್ತಿ ಪ್ರಶಸ್ತಿ ಪಡೆದಿರುವುದು ರಾಜ್ಯವೇ ಹೆಮ್ಮೆ ಪಡುವ ವಿಚಾರ.

ಮಂಗಳಮ್ಮ ಓದಿದ್ದು ಕೇವಲ ೫ನೇ ತರಗತಿ ಯಾದರೂ ಹೈನುಗಾರಿಕೆಯಲ್ಲಿ ಸಂಪೂರ್ಣ ಜ್ಞಾನವನ್ನು ಹೊಂದಿದ್ದಾರೆ. ೨೦ ವರ್ಷಗಳ ಹಿಂದೆ ಕೇವಲ ಒಂದು ಹಸುವಿನಿಂದ ಹೈನುಗಾರಿಕೆ ಪ್ರಾರಂಭಿಸಿದ ಇವರು ಇಂದು ೩೦ ಹೈಬ್ರಿಡ್ ತಳಿಯ ಹಸುಗಳನ್ನು ಸಾಕಿ ಹಾಲು ಉತ್ಪಾದನೆ ಮಾಡುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಒಂದು ಲಕ್ಷ ಲೀಟರ್‌ಗೂ ಅಧಿಕ ಹಾಲನ್ನು ಉತ್ಪಾದಿಸಿ ಡಿಂಕ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಸರಬರಾಜು ಮಾಡುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ. ಆ ಮೂಲಕ ಒಂದು ವರ್ಷದಲ್ಲಿ ೩೦ ಲಕ್ಷ ರೂಪಾಯಿ ಆದಾಯವನ್ನೂ ಗಳಿಸಿದ್ದಾರೆ.

ಮಂಗಳಮ್ಮನವರ ಸತತ ಪ್ರಯತ್ನ, ಕೆಲಸದ ಮೇಲಿನ ಶ್ರದ್ಧೆ ಫಲ ನೀಡಿದೆ. ಮಹಿಳೆಯರು ಸ್ವಾವಲಂಬಿಯಾಗಿ ಶ್ರಮಪಟ್ಟು ದುಡಿದರೆ ಏನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಂಗಳಮ್ಮರವರೇ ಮಾದರಿ. ಹೈನುಗಾರಿಕೆ ಮಾಡುವವರು ಮಂಗಳಮ್ಮನವರನ್ನು ಮಾದರಿಯಾಗಿ ಅನುಸರಿಸಿ ಅವರಂತೆ ಶ್ರಮಿಸಬೇಕು. ಸರ್ಕಾರ ಇವರ ಸಾಧನೆಯನ್ನು ಗುರುತಿಸಿ ಕರ್ನಾಟಕದ ಪ್ರತಿಷ್ಠಿತ ನಂದಿನಿ ಹಾಲಿನ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಬೇಕು.

-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು.

Tags:
error: Content is protected !!