ಕಳೆದ ಭಾನುವಾರ ಪ್ರಧಾನಿ ಮೋದಿಯವರು ಮನ್ ಕೀ ಬಾತ್ ಕಾರ್ಯ ಕ್ರಮದ ಮೂಲಕ ಜನರ ಸ್ಥೂಲಕಾಯ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿ ಅದಕ್ಕೆ ಪರಿಹಾರವನ್ನೂ ಸೂಚಿಸಿದ್ದಾರೆ. ಬೊಜ್ಜು ಸಮಸ್ಯೆಯ ಬಗ್ಗೆ ಮಾತನಾಡಿರುವ ಅವರು, ಮುಖ್ಯವಾಗಿ ಯುವ ಜನತೆಗೆ ಈ ಸ್ಥೂಲ ಕಾಯ ದಿಂದ ಆಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಿರುವುದು ಶ್ಲಾಘನೀಯ. ದೃಶ್ಯ ಮಾಧ್ಯಮ ಬಂದ ನಂತರ ರೇಡಿಯೋ ಕೇಳುವುದರಿಂದ ದೂರಾಗಿದ್ದ ಜನರನ್ನು ಮತ್ತೆ ರೇಡಿಯೋ ಕೇಳುವಂತೆ ಮಾಡಿದ ಕೀರ್ತಿ ಪ್ರಧಾನಿ ಮೋದಿಯವರಿಗೆ ಸಲ್ಲುತ್ತದೆ. ಯುವ ಸಮುದಾಯವನ್ನೊಳ ಗೊಂಡಂತೆ ದೇಶದ ಸರಾಸರಿ ಜನಸಂಖ್ಯೆಯ ೪ ಜನರಲ್ಲಿ ಒಬ್ಬರು ‘ಮಧುಮೇಹ‘ ಕಾಯಿಲೆಯಿಂದ ಬಳಲುತ್ತಿದ್ದು, ಆರೋಗ್ಯ ಇಲಾಖೆಯ ಅಂದಾಜಿನ ಪ್ರಕಾರ ೨೦೪೦ರ ವೇಳೆಗೆ, ಭಾರತ ಪ್ರಪಂಚದಲ್ಲೇ ಅತಿ ಹೆಚ್ಚು ಮಧುಮೇಹಿಗಳನ್ನು ಹೊಂದಿರುವ ದೇಶವಾಗಲಿದೆಯಂತೆ. ಆದ್ದರಿಂದ ಪ್ರಧಾನಿಯವರು ಮುಂದಿನ ದಿನಗಳಲ್ಲಿ ಮನ್ ಕೀ ಬಾತ್ ಮೂಲಕ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲಿ.
-ಬೂಕನಕೆರೆ ವಿಜೇಂದ್ರ,ಕುವೆಂಪುನಗರ, ಮೈಸೂರು.





