Mysore
19
clear sky

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಓದುಗರ ಪತ್ರ: ಮಹಾರಾಜ ಕಾಲೇಜು ಮೈದಾನದಲ್ಲಿಯೇ ಆಯೋಜನೆಯಾಗಲಿ

ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾ ಕಾರ್ಯಕ್ರಮ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದು, ಸಾವಿರಾರು ಮಂದಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಬರುತ್ತಾರೆ. ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರೂ ಯುವ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸುತ್ತಾರೆ. ಆದರೆ ಜಿಲ್ಲಾಡಳಿತ ಈ ಬಾರಿಯ ಯುವ ದಸರಾ ಕಾರ್ಯಕ್ರಮವನ್ನು ನಗರದ ಹೊರವಲಯದ ಉತ್ತನಹಳ್ಳಿ ಸಮೀಪ ಆಯೋಜಿಸಲು ತೀರ್ಮಾನಿಸಿದ್ದು, ಈ ವರ್ಗದವರು ಅಲ್ಲಿಗೆ ಬಂದು ಕಾರ್ಯಕ್ರಮವನ್ನು ವೀಕ್ಷಿಸಲು ಕಷ್ಟವಾಗಲಿದೆ. ಅಲ್ಲದೆ ಕಾರ್ಯಕ್ರಮ ರಾತ್ರಿಯ ವೇಳೆ ನಡೆಯುವುದರಿಂದ ಹೆಣ್ಣು ಮಕ್ಕಳು ಅಷ್ಟು ದೂರ ಬರಲು ಭಯಪಡುವಂತಾಗಿದೆ. ಇನ್ನು ಕಾರ್ಯಕ್ರಮ ನಗರದ ಹೊರವಲಯದಲ್ಲಿ ನಡೆಯುವುದರಿಂದ ಸಂತ ಸ್ವಂತ ವಾಹನಗಳನ್ನು ಹೊಂದಿರುವವರು ಸುರಕಿತವಾಗಿ ಬಂದು ಹೋಗಬಹುದು. ಆದರೆ, ವಾಹನಗಳಿಲ್ಲದಿರುವವರು ಕಾರ್ಯಕ್ರಮಕ್ಕೆ ಹೋಗಿ ನಡುರಾತ್ರಿಯಲ್ಲಿ ವಾಪಸ್ ಮನೆಗೆ ಬರುವುದಾದರೂ ಹೇಗೆ? ಜಿಲ್ಲಾಡಳಿತ ಇವೆಲ್ಲದರ ಬಗ್ಗೆ ಯೋಚಿಸಿ ಪರ್ಯಾಯ ವ್ಯವಸ್ಥೆಗಳನ್ನು ಮಾಡುವುದಾದರೆ ಮಾತ್ರ ಹೊರ ವಲಯದಲ್ಲಿ ಕಾರ್ಯಕ್ರಮ ಆಯೋಜಿಸಲಿ. ಇಲ್ಲವಾದಲ್ಲಿ ಎಂದಿನಂತೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜನೆ ಮಾಡಲಿ.

ಪ್ರಿಯಾಂಕ, ಆರ್.ಎಸ್.ನಾಯ್ಡು ನಗರ, ಮೈಸೂರು.

Tags: