ಪಿಎಂ ಕುಸುಮ್ ಬಿ ಯೋಜನೆಯಡಿ ಸೋಲಾರ್ ಪಂಪ್ ಸೆಟ್‌ಗೆ ಶೇ.80 ಸಬ್ಸಿಡಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ನೀರಾವರಿಗೆ ಸಾಂಪ್ರದಾಯಿಕ ವಿದ್ಯುತ್ ಅವಲಂಬನೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ, ಸೌರಶಕ್ತಿ ಬಳಕೆಯು ರೈತರು ಸ್ವಾವಲಂಬನೆ ಸಾಧಿಸಲು ಸಾಧ್ಯವಾಗುತ್ತದೆ.
ಕುಸುಮ್ ಬಿ ಯೋಜನೆಯಡಿ ಸೌರ ಕೃಷಿ ಪಂಪ್ ಸೆಟ್ ಅಳವಡಿಸಲು ಒತ್ತು ನೀಡಲಾಗಿದ್ದು, ಈ ಯೋಜನೆಗೆ ರಾಜ್ಯ ಸರ್ಕಾರ ಶೇ.೫೦, ಕೇಂದ್ರ ಸರ್ಕಾರ ಶೇ.೩೦ ಹಾಗೂ ಫಲಾನುಭವಿ ರೈತರು ಶೇ.೨೦ ಮೊತ್ತವನ್ನು ಪಾವತಿಸಬೇಕು, ಈ ಯೋಜನೆಯು ಡಿಸೆಂಬರ್ ತಿಂಗಳಲ್ಲಿ ಕೊನೆಗೊಳ್ಳಲಿದ್ದು ರೈತರು ಆದಷ್ಟು ಬೇಗ ಯೋಜನೆಯ ಉದ್ದೇಶವನ್ನು ಸದ್ಬಳಕೆ ಮಾಡಿಕೊಳ್ಳುವುದು ಒಳ್ಳೆಯದು ಎಂದು ಸೆಸ್ಕ್ ಎಂಡಿ ಕೆ.ಎಂ. ಮುನಿಗೋಪಾಲ ರಾಜು ಅವರು ಮನವಿ ಮಾಡಿರುವುದು ಶ್ಲಾಘನೀಯ. ರೈತರು ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳುವುದು ಅಗತ್ಯ.
-ಬೆಸಗರಹಳ್ಳಿ ರವಿ ಪ್ರಸಾದ್, ಮೈಸೂರು





