Mysore
18
broken clouds

Social Media

ಭಾನುವಾರ, 22 ಡಿಸೆಂಬರ್ 2024
Light
Dark

ಓದುಗರ ಪತ್ರ| ಜ್ಯಾತ್ಯಾತೀತ ನಾಗರೀಕ ಸಂಹಿತೆ ಬಗ್ಗೆ ಪ್ರಧಾನಿ ವಿವರಣೆ ನೀಡಲಿ

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿದ ಭಾಷಣ ದೇಶದಲ್ಲಿ ಕೋಮು ದ್ವೇಷವನ್ನು ಹೆಚ್ಚು ಮಾಡಲು ಪ್ರಚೋಧಿಸುವಂತಿದೆ.

ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದ ಅವರು, ‘ದೇಶದಲ್ಲಿ ಸದ್ಯದಲ್ಲಿ ಜಾರಿಯಲ್ಲಿರುವ ನಾಗರಿಕ ಸಂಹಿತೆಯು ಕೋಮುವಾದ ಮತ್ತು ತಾರತಮ್ಯದಿಂದ ಕೂಡಿದ್ದು, ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿದೆ. ಇಂತಹ ಸಂಹಿತೆಯೊಂದಿಗೆ ನಾವು ೭೫ ವರ್ಷಗಳ ಕಾಲ ಜೀವಿಸಿದ್ದು, ದೇಶಕ್ಕೆ ಜಾತ್ಯತೀತ ನಾಗರಿಕ ಸಂಹಿತೆ ತುರ್ತು’ ಎಂದು ಹೇಳಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ದೇಶ ಸ್ವತಂತ್ರಗೊಂಡ ಬಳಿಕ ಡಾ.ಬಿ.ಆರ್.ಅಂಬೇಡ್ಕರ್‌ರವರು ರಚಿಸಿದ ಸಂವಿಧಾನದ ಕಾನೂನಿನಡಿ ಆಡಳಿತ ನಡೆಸಲಾಗುತ್ತಿದೆ. ಇಂತಹ ದೇಶದಲ್ಲಿ ಇಷ್ಟು ವರ್ಷಗಳ ಕಾಲ ಕೋಮುವಾದಿ ನಾಗರಿಕ ಸಂಹಿತೆ ಹೊಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿ ಹೇಳಿರುವುದು ಸಂವಿಧಾನ ಹಾಗೂ ಡಾ.ಬಿ.ಆರ್.ಅಂಬೇಡ್ಕರ್‌ರವರಿಗೆ ಅಪಮಾನ ಮಾಡಿದಂತಾಗಿದೆ. ಅಲ್ಲದೇ ದೇಶದ ಸೌರ್ಹದತೆಗೆ ಧಕ್ಕೆಯುಂಟು ಮಾಡಿದೆ.

ಪ್ರಸ್ತುತದ ನಾಗರಿಕ ಸಂಹಿತೆ ದೇಶದಲ್ಲಿ ಕೋಮುವಾದವನ್ನು ಬಿತ್ತುವುದಾದರೇ ಮೋದಿಯವರು ಜಾರಿ ಮಾಡಲು ಹೊರಟಿರುವ ಜ್ಯಾತ್ಯತೀತ ನಾಗರಿಕ ಸಂಹಿತೆ ಎಂದರೇನು? ಅದು ಏನನ್ನು ಸೂಚಿಸುತ್ತದೆ ಎಂಬುದರ ಬಗ್ಗೆ ಅವರೇ ವಿವರಣೆ ನೀಡಲಿ. ಭಾರತವನ್ನು ಸಂಪೂರ್ಣವಾಗಿ ಹಿಂದೂ ರಾಷ್ಟ್ರ ಮಾಡಬೇಕು ಎಂಬ ಪಣ ತೊಟ್ಟಿರುವ ನರೇಂದ್ರ ಮೋದಿಯವರಿಗೆ ಹಿಂದೂ ರಾಷ್ಟ್ರ ಮಾಡುವುದೇ ಜ್ಯಾತ್ಯಾತೀತ ಸಂಹಿತೆಯೇ? ಇದಕ್ಕೆ ಅವರು ಮೊದಲು ಉತ್ತರಿಸಲಿ.

-ಎಂ.ಸುರೇಶ್, ಸಿಂಧುವಳ್ಳಿ, ನಂಜನಗೂಡು ತಾ.

Tags: