ಮೈಸೂರು-ಬೆಂಗಳೂರು ಹೈವೆಯ ಡಿವೈಡರ್‌ಗಳಲ್ಲಿ ಬೆಳೆಸಲಾಗಿದ್ದ ಹೂವಿನ ಗಿಡಗಳಿಗೆ ಬೆಂಕಿ ಹಾಕಿ ಸುಟ್ಟು ಹಾಕಲಾಗಿದೆ.
ಹೆದ್ದಾರಿಯು ಸುಂದರವಾಗಿ ಕಾಣಲಿ ಎಂದು ಹೆದ್ದಾರಿಯ ಡಿವೈಡರ್‌ಗಳಲ್ಲಿ ವಿವಿಧ ಜಾತಿಯ ಹೂವಿನ ಗಿಡಗಳನ್ನು ಬೆಳೆಸಲಾಗಿತ್ತು. ಆ ಗಿಡಗಳನ್ನು ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ನಿರ್ವಹಣೆ ಮಾಡಬೇಕಿತ್ತು. ಆದರೆ ಬೇಸಿಗೆಯಲ್ಲಿ ಈ ಗಿಡಗಳು ನೀರಿಲ್ಲದೆ ಒಣಗಿ ಹೋಗಿದ್ದು, ಬೆಂಕಿ ತಗುಲಿ ಸುಟ್ಟು ಹೋಗಿದ್ದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹೆದ್ದಾರಿಯ ನಿರ್ವಹಣೆಗಾಗಿ ನಿತ್ಯ ಟೋಲ್ ಮೂಲಕ ಹಣ ಸಂಗ್ರಹಿಸಲಾಗುತ್ತದೆ. ಆದರೆ, ಹೆದ್ದಾರಿಯಲ್ಲಿನ ಗಿಡಗಳನ್ನೇ ರಕ್ಷಿಸಿಕೊಳ್ಳಲಾಗದ ಅಧಿಕಾರಿಗಳು ಇನ್ನು ಹೆದ್ದಾರಿಯನ್ನು ಹೇಗೆ ರಕ್ಷಿಸುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಹೆದ್ದಾರಿಯಲ್ಲಿನ ಹೂವಿನ ಗಿಡಗಳಿಗೆ ಬೆಂಕಿ ಹಾಕುವ ಬದಲು ನೀರು ಹಾಕಿ ಬೆಳೆಸಬೇಕಿದೆ. ಒಂದು ವೇಳೆ ಇದು ಕಿಡಿಗೇಡಿಗಳ ಕೃತ್ಯವಾಗಿದ್ದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ.
-ಸಿದ್ದಲಿಂಗೇಗೌಡ, ಹೈರಿಗೆ, ಎಚ್.ಡಿ.ಕೋಟೆ ತಾ.



