ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ನಡುವಿನ ಸಂಘರ್ಷದಿಂದ ಲಾಭವಾಗುವುದು ಬಿಜೆಪಿಗೆ. ಇದನ್ನು ಇಬ್ಬರೂ ತಿಳಿಯಬೇಕು. ಅಧಿಕಾರ, ಸಂಪತ್ತು, ಯೌವನ ಎಂದಿಗೂ ಶಾಶ್ವತವಲ್ಲ ಎಂಬುದನ್ನು ಅವರು ಮೊದಲು ಅರಿಯಲಿ.
ಹವಾಮಾನ ವೈಪರೀತ್ಯದಿಂದ ಜನರ ಬದುಕು ಹೈರಾಣಾಗಿದೆ. ಈ ಬಗ್ಗೆ ನಾಯಕರು ಹೆಚ್ಚು ಗಮನ ಹರಿಸಲಿ. ೨೦೨೩ರಲ್ಲಿ ಪಕ್ಷ ಅಧಿಕಾರಕ್ಕೆ ಪದಾರ್ಪಣೆಯಾದಾಗ ಈ ನಾಯಕರು ಆಡಿದಂತೆ, ಜನರು ಅಂದುಕೊಂಡಂತೆ ನಡೆದುಕೊಂಡು, ನಾಡಿನ ಆದರ್ಶ ನಾಯಕರಾಗಬೇಕು.
-ಕೆ.ಎಸ್.ಚಿಕ್ಕೇಗೌಡ, ಗಂಗೋತ್ರಿ ಬಡಾವಣೆ, ಮೈಸೂರು.





