ತಿರುಪತಿ-ಚಾಮರಾಜನಗರ ಎಕ್ಸ್‌ಪ್ರೆಸ್ (೧೬೨೨೦) ರೈಲು ಕಳೆದ ಆರು ತಿಂಗಳಿನಿಂದ ನಿರಂತರವಾಗಿ ತಡವಾಗಿ ಸಂಚರಿಸುತ್ತಿದ್ದು, ಇದರಿಂದ ಮೈಸೂರು-ನಂಜನಗೂಡು -ಚಾಮರಾಜನಗರ ಮಾರ್ಗವಾಗಿ ಪ್ರಯಾಣಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಬಹಳ ತೊಂದರೆಯಾಗಿದೆ. ರೈಲು ಸಕಾಲಕ್ಕೆ ತಲುಪದೇ ಇರುವುದರಿಂದ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.
ರೈಲು ತಡವಾಗಿ ಚಲಿಸುತ್ತಿರುವ ಬಗ್ಗೆ ಸಾರ್ವಜನಿಕರು ಹಲವಾರು ಬಾರಿ ರೈಲ್ವೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರೈಲ್ವೆ ಇಲಾಖೆ ಈ ಸಮಸ್ಯೆಯನ್ನು ತಕ್ಷಣ ಗಂಭೀರವಾಗಿ ಪರಿಗಣಿಸಿ, ರೈಲಿನ ವೇಳಾಪಟ್ಟಿಯನ್ನು ಸುಧಾರಿಸುವ ಜೊತೆಗೆ ಹಿಂದಿನಂತೆ ಪರ್ಯಾಯ ರೈಲು ಸೇವೆಯನ್ನು ಮರುಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು.
-ಲೋಕೇಶ್, ಬಸವನಗುಡಿ ಬ್ಲಾಕ್, ನಂಜನಗೂಡು





