ಕನ್ನಡದ ಖಾಸಗಿ ಚಾನೆಲ್‌ವೊಂದರಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಸೀಸನ್-11 ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದು, ಸ್ಪರ್ಧಿಗಳು ನಿತ್ಯ ಜಗಳವಾಡುತ್ತಿರುವುದರಿಂದ ಕಾರ್ಯಕ್ರಮ ವೀಕ್ಷಿಸುವವರಿಗೆ ಕಿರಿಕಿರಿಯಾಗುತ್ತಿದೆ.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಬಿಗ್‌ಬಾಸ್ ಮನೆಗೆ ಆಯ್ಕೆ ಮಾಡಿ ಕಳುಹಿಸಲಾಗಿದೆ. ಆದರೆ ಆ ಮನೆಯೊಳಗೆ ಅವರ ವರ್ತನೆ ನೋಡುತ್ತಿದ್ದರೆ ಇವರು ಸಾಧಕರೇ ಎಂಬ ಅನುಮಾನ ಮೂಡುತ್ತದೆ. ಯಾವುದೇ ರಿಯಾಲಿಟಿ ಶೋಗಳಾದರು ಅವು ಪ್ರೇಕ್ಷಕರಿಗೆ ಮನರಂಜನೆ ನೀಡುವ ಉದ್ದೇಶದಿಂದ ಪ್ರಸಾರವಾಗಬೇಕು. ಆದರೆ ಇಲ್ಲಿ ಸ್ಪರ್ಧಿಗಳು ಸದಾ ಅವಾಚ್ಯವಾಗಿ ನಿಂದಿಸುತ್ತಾ ಮಾತನಾಡುತ್ತಿರುವುದರಿಂದ ಕಾರ್ಯಕ್ರಮವನ್ನು ಕುಟುಂಬದೊಂದಿಗೆ ಕುಳಿತು ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಕಾರ್ಯಕ್ರಮಗಳಿಂದ ಸಮಾಜಕ್ಕೆ ಯಾವುದೇ ರೀತಿಯ ಸಂದೇಶವೂ ರವಾನೆಯಾಗುವುದಿಲ್ಲ, ಆದ್ದರಿಂದ ತಕ್ಷಣವೇ ಈ ಕಾರ್ಯಕ್ರಮವನ್ನು ನಿಲ್ಲಿಸುವುದು ಒಳಿತು.
-ಹರಳಹಳ್ಳಿ ಪುಟ್ಟರಾಜು, ತಾಂಡವವುರ,