ಮೈಸೂರಿನಲ್ಲಿ ಬಿಜೆಪಿ ಮುಖಂಡ ಎನ್.ವಿ.ಫಣೀಶ್ ಅವರ ನೇತೃತ್ವದಲ್ಲಿ ಭಾನುವಾರ (ಮಾ.೨೩)ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಿರುವುದನ್ನು ಸ್ಮರಿ ಸುತ್ತಾ ಪಂಜಿನ ಮೆರವಣಿಗೆ ಮಾಡಿ, ಬಲಿದಾನ ದಿನ ಆಚರಿಸಿರುವುದು ‘ಆಂದೋಲನ’ ದಿನಪತ್ರಿಕೆಯ ಮಾ.೨೪ರ ಸಂಚಿಕೆಯಲ್ಲಿ ವರದಿಯಾಗಿದೆ.
ಬಿಜೆಪಿಯವರು ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ನೆನೆಪಿಸಿಕೊಂಡಿರುವುದು ಸ್ವಾಗತಾರ್ಹ. ಈ ಬಿಜೆಪಿಯವರಲ್ಲಿ ಒಂದು ವಿನಂತಿ. ಭಗತ್ ಸಿಂಗ್ ಮತ್ತು ಸಂಗಾತಿಗಳ ಆದರ್ಶಗಳು, ಈ ಹುತಾತ್ಮರು ಸ್ಥಾಪಿಸಿದ್ದ ܪ Hindusthan Socialist Republican
Army ಹಾದಿಯಲ್ಲಿ ಮುನ್ನಡೆದು ಶೋಷಣಾ ರಹಿತ ಸಮಾಜ ಉದಯವಾಗಲು ಮುನ್ನಡೆಯಲಿ ಎಂದು ವಿನಂತಿಸುತ್ತೇನೆ. ಹಾಗೆಯೇ ಭಗತ್ ಸಿಂಗ್ ಅವರ ನಾನೇಕೆ ನಾಸ್ತಿಕ (Why I am an Athiest) ÖÝWÜã Jail Dairy) ಕೃತಿಗಳನ್ನು ಮನನ ಮಾಡಿಕೊಳ್ಳಲಿ ಎಂದು ಆಶಿಸುತ್ತೇನೆ.
-ಲ.ಜಗನ್ನಾಥ್, ಅಗ್ರಹಾರ, ಮೈಸೂರು





