ರಾಜ್ಯದಲ್ಲಿ ಇನ್ನು ಮುಂದೆ, ಜಾತಿ, ಧರ್ಮ ಭಾಷೆ, ಧಾರ್ಮಿಕ ಮತ್ತು ಜನಾಂಗೀಯ ನಿಂದನೆ, ಲೈಂಗಿಕ ದೃಷ್ಟಿಕೋನ ಮತ್ತು ಜನ್ಮ ಸ್ಥಳದ ವಿಚಾರವಾಗಿ ಬಹಿರಂಗವಾಗಿ ದ್ವೇಷ ಭಾಷಣ ಮಾಡುವವರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ಸೇರಿದಂತೆ ೫ ಸಾವಿರ ರೂ. ದಂಡ ವಿಧಿಸುವ ಹಾಗೂ ಮೂಢ ನಂಬಿಕೆಯ ಆಚರಣೆ ಹೆಸರಿನಲ್ಲಿ ಸಾಮಾಜಿಕವಾಗಿ ಬಹಿಷ್ಕಾರ ಹಾಕುವ ಪ್ರಕರಣಗಳು ಸಾಬೀತಾದರೆ ಅಂತಹ ವ್ಯಕ್ತಿಗಳಿಗೆ ಮೂರು ವರ್ಷಗಳ ಕಾಲ ಜೈಲು ಮತ್ತು ಒಂದು ಲಕ್ಷ ರೂ. ದಂಡ ವಿಧಿಸುವ ಕಾನೂನನ್ನು ರೂಪಿಸಿದ್ದು, ಈ ವಿಧೇಯಕಗಳನ್ನು ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಗುರುವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಾಪಂಚ್ ಕಾರ್ಟೂನ್
ರಾಜ್ಯ ಸರ್ಕಾರ ಇಂತಹ ಕಠಿಣ ಕಾನೂನು ತರಲು ನಿರ್ಧರಿಸಿರುವುದು ಒಂದು ದಿಟ್ಟ ಕ್ರಮ ಎಂದೇ ಹೇಳಬೇಕು. ಈ ಕಾನೂನು ಆದಷ್ಟೂ ಬೇಗ ಜಾರಿಗೆ ಬಂದು, ದ್ವೇಷ ಭಾಷಣ ಮಾಡುವವರಿಗೆ ಶಿಕ್ಷೆಯಾಗಿ ಸಾಮಾಜಿಕ ಸ್ವಾಸ್ಥ್ಯ ಶಾಶ್ವತವಾಗಿ ಉಳಿಯುವಂತಾಗಲಿ.ದ್ವೇಷ ಭಾಷಣವನ್ನೇ ಕಾಯಕ ವಾಗಿಸಿಕೊಂಡವರಿಗೆ ಒಂದು ಪಾಠವಾಗಲಿ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





