Mysore
16
clear sky

Social Media

ಬುಧವಾರ, 10 ಡಿಸೆಂಬರ್ 2025
Light
Dark

ಓದುಗರ ಪತ್ರ: ಕುವೆಂಪು ಅವರಿಗೆ ಭಾರತರತ್ನಕ್ಕೆ ಶಿಫಾರಸು ಶ್ಲಾಘನೀಯ

ಓದುಗರ ಪತ್ರ

ನಮ್ಮ ನಾಡಿನ ಸಾಕ್ಷಿ ಪ್ರಜ್ಞೆ ಜಗದಗಲಕ್ಕೂ ಮನುಜ ಮತ ವಿಶ್ವಪಥ ಎಂಬ ಸಂದೇಶ ಸಾರಿದ ಮೇರು ವ್ಯಕ್ತಿತ್ವದ ಜ್ಞಾನ ಶಿಖರ ರಾಷ್ಟ್ರಕವಿ ಕುವೆಂಪು ಅವರಿಗೆ ದೇಶ ಕೊಡ ಮಾಡುವ ಪ್ರತಿಷ್ಠಿತ ಪ್ರಶಸ್ತಿಯಾದ ‘ಭಾರತರತ್ನ’ ವನ್ನು ಮರಣೋತ್ತರವಾಗಿ ಕೊಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಡೆ ಶ್ಲಾಘನೀಯ ಹಾಗೂ ಕನ್ನಡಿಗರಿಗೆ ಹೆಮ್ಮೆಯ ವಿಷಯ.

ಕನ್ನಡ ಭಾಷೆಯ ಸಾಹಿತ್ಯ ಸಾಂಸ್ಕ ತಿಕ ಲೋಕವನು  ಶ್ರೀಮಂತ ಗೊಳಿಸಿದವರಲ್ಲಿ ಕುವೆಂಪು ಎಂದಿಗೂ ಅಗ್ರಗಣ್ಯರು. ತಮ್ಮ ಜೀವಮಾನವನ್ನೆಲ್ಲಾ ವೈಚಾರಿಕತೆಗೆ ಒತ್ತು ನೀಡಿ ಮೌಢ್ಯ ಕಟ್ಟುಪಾಡುಗಳಿಗೆ ಸಡ್ಡು ಹೊಡೆದು ತಾವು ನುಡಿದಂತೆ ನಡೆದು ಬರೆದಂತೆ ಬದುಕಿ ವಿಶಾಲ ಮನೋಭಾವಹೊಂದಿ ವೈಜ್ಞಾನಿಕತೆಗೆ ಮುನ್ನೆಲೆ ಹಾಕಿದ ಸಮ ಸಮಾಜದ ಆದರ್ಶವಾದಿ. ಕೇಂದ್ರ ಸರ್ಕಾರವು ಅರ್ಹ ಹಾಗೂ ಯೋಗ್ಯರಾದ ಇವರಿಗೆ ಮರಣೋತ್ತರವಾಗಿ ‘ಭಾರತರತ್ನ ’ ನೀಡಲಿ.

– ಅನಿಲ್ ಕುಮಾರ್, ನಂಜನಗೂಡು

Tags:
error: Content is protected !!