Mysore
14
few clouds

Social Media

ಶನಿವಾರ, 27 ಡಿಸೆಂಬರ್ 2025
Light
Dark

ಓದುಗರ ಪತ್ರ: ಕಮಲ್ ನಾಯಕ, ಕಲಾವಿದ ಆಗಲೇ ಇಲ್ಲ…

ಓದುಗರ ಪತ್ರ

ಇತ್ತೀಚೆಗೆ ತಮ್ಮ ಹೊಸ ಸಿನಿಮಾ ಥಗ್ ಲೈಫ್ ಪರ ಪ್ರಚಾರದ ಸಂದರ್ಭದಲ್ಲಿ ಪ್ರಸಿದ್ಧ ನಟ ಕಮಲ್‌ಹಾಸನ್ ಅವರು ಕನ್ನಡ ಭಾಷೆ ತಮಿಳು ಭಾಷೆಯಿಂದ ಹುಟ್ಟಿದ್ದು, ಎಂಬ ಅಸಂಬದ್ಧ ಹೇಳಿಕೆ ನೀಡಿ ಕನ್ನಡ ಜನಮಾನಸವನ್ನು ಕೆಣಕಿದ್ದಾರೆ.

ಮುಂದುವರಿದು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸುವ ಬದಲು,ತಪ್ಪು ಮಾಡುವ ಜಾಯಮಾನ ತನ್ನದಲ್ಲ, ಕ್ಷಮೆ ಕೇಳುವುದಿಲ್ಲ ಎಂದು ಮರು ಹೇಳಿಕೆ ನೀಡಿ ಈಗ ಹೈಕೋರ್ಟ್ ಮೆಟ್ಟಿಲೇರಿದ್ದರು. ಕರ್ನಾಟಕ ಮತ್ತು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಹಿನ್ನೆಲೆಯಲ್ಲಿ ನಟ ಕಮಲ್ ಹಾಸನ್ ಅಭಿನಯದ ಥಗ್ ಲೈಫ್ ಚಿತ್ರ ಬಿಡುಗಡೆಗೆ ಉಚ್ಚ ನ್ಯಾಯಾಲಯ ಒಂದು ವಾರ ಕಾಲ ತಡೆಯಾಜ್ಞೆ ನೀಡಿದೆ. ಕಮಲ್ ಈ ವರೆಗೂ ತಮ್ಮ ನಟನೆಯಿಂದ ಜನ ಮನ ಗೆದ್ದಿದ್ದಾರೆಯೇ ಹೊರತು ತಮ್ಮ ನಡೆ ನುಡಿಯಿಂದ ಅಲ್ಲ. ನರೇಂದ್ರ ಮೋದಿಯವರ ಕೋಮು ಮತ್ತು ಬಂಡವಾಳ ರಾಜಕಾರಣ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಹತ್ತಿಕ್ಕಲು ಹವಣಿಸುತ್ತಿರುವ ಈ ಹೊತ್ತಿನಲ್ಲಿ ರಾಜ್ಯಸಭೆಗೆ ಹೊರಡಲು ಕಮಲ್ ಸಿದ್ಧವಾಗುತ್ತಿದ್ದಾರೆ. ದಕ್ಷಿಣ ರಾಜ್ಯಗಳ ಧ್ವನಿಯಾಗಲು ವೇದಿಕೆಯತ್ತ ಹೊರಟಿರುವ ಕಮಲ್ ತಮ್ಮ ಮಾತಿಗೆ ವಿಷಾದ ವ್ಯಕ್ತಪಡಿಸಿ ನಾಯಕನಾಗಿ ಹೊರಹೊಮ್ಮಲಿ. ಇಲ್ಲವಾದರೆ, ಕನ್ನಡಿಗರ ಎದೆಗೆ ವಿಷದ ಸೂಜಿ ಚುಚ್ಚಿದ ಕಹಿ ನೆನಪಾಗಿ ಉಳಿದುಬಿಡುತ್ತಾರೆ. ಹೊಸ ಜವಾಬ್ದಾರಿಯತ್ತ ಹೊರಟಿರುವ ಅವರಿಗೆ ಕನಿಷ್ಠ ರಾಜಕೀಯ ಅರಿವು ಮೂಡಲಿ.

– ಉಗ್ರನರಸಿಂಹೇಗೌಡ, ಸರ್ವೋದಯ ಕರ್ನಾಟಕ, ಮೈಸೂರು

Tags:
error: Content is protected !!