ಈ ಮನುಷ್ಯರ ತೃಪ್ತಿಪಡಿಸಲು ಸಾಧ್ಯವೇ?
ಬಿಸಿಲಾದರೆ, ಅಯ್ಯೋ ತಾಪ ತಾಳಲಾರೆ..
ಮಳೆ ಬರಬಾರದೇ..?
ಮಳೆಯಾದರೆ, ಏನು ಮಳೆಯೋ…
ಆಕಾಶವೇ ಕಳಚಿ ಬಿದ್ದಿದೆ..!
ಚಳಿಯಾದರೆ, ಎಂಥ ಚಳಿ ಮಾರಾಯ,
ಮೈಯೆಲ್ಲಾ ಮರಗಟ್ಟಿದೆ..!
ಚಳಿ, ಮಳೆ, ಬಿಸಿಲು ಒಮ್ಮೆ
ಸೇರಿದಾಗ ವ್ಯಕ್ತವಾದ ತೀರ್ಪು..
ಏನ್ರಪ್ಪ, ಈ ಮನುಷ್ಯರನ್ನು
ಎಂದಾದರೂ ತೃಪ್ತಿ
ಪಡಿಸಲು ಸಾಧ್ಯವಾ..!?!
-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು





