Mysore
24
broken clouds

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಓದುಗರ ಪತ್ರ| ರೈತನಿಗೆ ಅವಮಾನ ಮಾಡಿದ್ದು ಖಂಡನೀಯ

ಪಂಚೆ ಧರಿಸಿದ್ದರು ಎಂಬ ಕಾರಣಕ್ಕೆ ಬೆಂಗಳೂರಿನ ಮಾಲ್‌ವೊಂದರಲ್ಲಿ ರೈತರೊಬ್ಬರಿಗೆ ಮಾಲ್ ಒಳಗೆ ಪ್ರವೇಶ ನೀಡದೆ ಅಪಮಾನ ಮಾಡಿರುವುದಾಗಿ ವರದಿಯಾಗಿದೆ. ನಾಗರಾಜ್ ಎಂಬವರು ತಮ್ಮ ತಂದೆ ಫಕೀರಪ್ಪರನ್ನು ಮಾಲ್‌ನಲ್ಲಿಸಿನಿಮಾ ತೋರಿಸಲೆಂದು ಕರೆದುಕೊಂಡು ಬಂದಿದ್ದರು. ಆದರೆ, ಫಕೀರಪ್ಪ ಪಂಚೆ ಧರಿಸಿದ್ದರು ಎಂಬ ಕಾರಣಕ್ಕೆ ಮಾಲ್‌ನ ಸೆಕ್ಯೂರಿಟಿ ಸಿಬ್ಬಂದಿ ಅವರನ್ನು ಮಾಲ್ ಒಳಗೆ ಬಿಡದೆ ಅಪಮಾನ ಮಾಡಿದ್ದಾರೆ.

ಪಂಚ ಈ ನೆಲದ ಸಂಸ್ಕೃತಿ. ಇದನ್ನು ಗೌರವಿಸುವುದನ್ನು ಮಾಲ್‌ನಲ್ಲಿರುವವರು ಕಲಿಯಬೇಕು. ರೈತರಿಗೆ ಈ ರೀತಿ ಅಪಮಾನ ಮಾಡುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಮೆಟ್ರೋ ರೈಲು ಹತ್ತಲು ಬಂದಿದ್ದ ರೈತರನ್ನು ಸಿಬ್ಬಂದಿ ತಡೆದು ಅಪಮಾನ ಮಾಡಿದ್ದರು. ರೈತರಿಗೆ ಪದೇ ಪದೇ ಈ ರೀತಿ ಅವಮಾನ ಮಾಡುತ್ತಿರು ವುದು ಖಂಡನೀಯ. ಸದ್ಯ ರಾಜ್ಯ ಸರ್ಕಾರ ಈ ಪ್ರಕರಣದಲ್ಲಿ ಕಠಿಣ ಕ್ರಮವಹಿಸಿದ್ದು, 7 ದಿನಗಳ ಕಾಲ ಮಾಲ್‌ಅನ್ನು ಮಾಲ್‌ ಅನ್ನು ಬಂದ್ ಮಾಡಿಸಿರುವುದು ಸರಿಯಾದ ನಿರ್ಧಾರವಾಗಿದೆ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.

Tags: