ಮೈಸೂರಿನ ಶ್ರೀರಾಂಪುರ ವಾಟರ್ ಟ್ಯಾಂಕ್ ಸರ್ಕಲ್‌ಗೆ ನಾಲ್ಕು ದಿಕ್ಕಿನಿಂದಲೂ ರಸ್ತೆಗಳು ಕೂಡುತ್ತಿವೆ. ಯಾವ ರಸ್ತೆಗೂ ಹಂಪ್‌ಗಳನ್ನು ಅಳವಡಿಸದ ಪರಿಣಾಮ ಆಗಾಗ್ಗೆ ಅಪಘಾತಗಳು ಸಂಭವಿಸುತ್ತಿವೆ.
ನಗರದ ಭ್ರಮಾರಾಂಬ ಕಲ್ಯಾಣ ಮಂಟಪದ ಸಮೀಪವಿರುವ ಈ ಸರ್ಕಲ್ ವಿವೇಕಾನಂದ ಸರ್ಕಲ್, ಬೆಮೆಲ್ ಲೇಔಟ್, ಎಲ್‌ಐಸಿ ಕಾಲೋನಿ ಮತ್ತು ಲಿಂಗಾಂಬುಽ ಪಾಳ್ಯಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅಲ್ಲದೆ ಪರಸಯ್ಯನ ಹುಂಡಿಗೂ ಇದೇ ಸರ್ಕಲ್ ಮೂಲಕ ಹಾದು ಹೋಗಬೇಕು.
ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಗಳಿಗೆ ಹಂಪ್ ಗಳಿಲ್ಲದಿರುವ ಪರಿಣಾಮ ವಾಹನ ಸವಾರರು ವೇಗವಾಗಿ ಸಂಚರಿಸುತ್ತಿದ್ದು, ನಿತ್ಯ ಒಂದಲ್ಲ ಒಂದು ಅಪಘಾತ ಸಂಭವಿಸುತ್ತಿವೆ. ಈ ರಸ್ತೆಗಳಿಗೆ ಹಂಪ್‌ಗಳನ್ನು ಅಳವಡಿಸುವಂತೆ ಸಂಬಂಧಪಟ್ಟವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಮಹಾನಗರ ಪಾಲಿಕೆಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಈ ವೃತ್ತಕ್ಕೆ ಸಂಪರ್ಕಗೊಂಡಿರುವ ರಸ್ತೆಗಳಿಗೆ ಹಂಪ್‌ಗಳನ್ನು ಅಳವಡಿಸಬೇಕಿದೆ.
-ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು