ಬೆಂಗಳೂರು ನಗರದ ಯಶವಂತಪುರ ಜಂಕ್ಷನ್ – ಹಾಸನ ಜಂಕ್ಷನ್ ಮಾರ್ಗದ ಹಾಸನ ಸೂಪರ್ ಎಕ್ಸ್ ಎಕ್ಸ್‌ಪ್ರೆಸ್ ೧೧೩೧೧ ರೈಲಿನ ಜನರಲ್ ಬೋಗಿಗಳಲ್ಲಿ ಕಿಟಕಿ ಗ್ಲಾಸ್‌ಗಳು ಒಡೆದು ಹಾಳಾಗಿರುವುದರಿಂದ ಮರದ ಹಲಗೆಯನ್ನು ಅಳವಡಿಸಿದ್ದಾರೆ. ಅದನ್ನು ತೆಗೆಯಲು ಮತ್ತು ಮುಚ್ಚಲು ವಾಟರ್ ಪೈಪ್ ಹಾಗೂ ಎಲೆಕ್ಟ್ರಿಕಲ್ ಪೈಪ್‌ಗಳಿಗೆ ಹಾಕುವ ಕ್ಲ್ಯಾಂಪ್‌ಗಳನ್ನು ಅಳವಡಿಸಲಾಗಿದ್ದು, ಪ್ರಯಾಣಿಕರಿಗೆ ಕಿಟಕಿ ತೆರೆಯಲು ತೀವ್ರ ತೊಂದರೆಯಾಗುತ್ತಿದೆ.
ಕಿಟಕಿಗಳಿಗೆ ಮರದ ಶೀಟ್ ಅಳವಡಿಸಿರುವುದರಿಂದ ಕಳ್ಳರಿಗೆ ಕದಿಯಲು ಅವಕಾಶ ಕಲ್ಪಿಸಿದಂತಾಗಿದೆ. ಆದ್ದರಿಂದ ಸಂಬಂಧಪಟ್ಟ ರೈಲ್ವೆ ಅಧೀಕಾರಿಗಳು ತಕ್ಷಣವೇ ಈ ಸಮಸ್ಯೆಯನ್ನು ಬಗೆಹರಿಸಿ ರೈಲು ಪ್ರಯಾಣಿಕರಿಗೆ ಭದ್ರತೆ ಒದಗಿಸಲು ಮುಂದಾಗಬೇಕು.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು





