ರಾಜ್ಯ ಕಾಂಗ್ರೆಸ್ ಸರ್ಕಾರ ‘ಗ್ಯಾರಂಟಿ’ ಯೋಜನೆಗಳಲ್ಲಿ ಒಂದಾದ ಗೃಹ ಜ್ಯೋತಿ ಯೋಜನೆಯಡಿ ಸರ್ಕಾರ ೨೦೦ ಯೂನಿಟ್ ವಿದ್ಯುತ್‌ಅನ್ನು ಉಚಿತವಾಗಿ ನೀಡುತ್ತಿದ್ದು, ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಬೇಕಿದೆ.
ಪ್ರತಿ ಕುಟುಂಬವೂ ಗೃಹಜ್ಯೋತಿ ಯೋಜನೆಯಡಿ ವಾರ್ಷಿಕವಾಗಿ ಬಳಸಿರುವ ವಿದ್ಯುತ್ ಯೂನಿಟ್‌ಗಳ ಆಧಾರದ ಮೇಲೆ ಹೆಚ್ಚುವರಿಯಾಗಿ ಶೇ.೧೦ರಷ್ಟು ವಿದ್ಯುತ್ ಯೂನಿಟ್‌ಗಳನ್ನು ಉಚಿತವಾಗಿ ನೀಡುವುದಾಗಿಯೂ ಸರ್ಕಾರ ತಿಳಿಸಿದೆ. ಸರ್ಕಾರದ ಈ ಕ್ರಮ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನುಕೂಲವಾಗಿದೆ. ಆದರೆ ಈ ಹಿಂದೆ ವಾರ್ಷಿಕವಾಗಿ ಕಡಿಮೆ ವಿದ್ಯುತ್ ಬಳಸಿರುವ ಕುಟುಂಬಗಳು ಹೆಚ್ಚುವರಿ ಯಾಗಿ ಬಳಸಿರುವ ಯೂನಿಟ್‌ಗಳಿಗೆ ದರ ಪಾವತಿಸಬೇಕಾಗಿದೆ. ಸರ್ಕಾರ ಗೃಹ ಜ್ಯೋತಿ ಯೋಜನೆ ಜಾರಿಗೊಳಿಸಿದ ಬಳಿಕ ಹಲವು ಬಾರಿ ವಿದ್ಯುತ್ ದರ ಪರಿಷ್ಕರಣೆ ಮಾಡಿದೆ. ಅಲ್ಲದೆ ಇದೇ ಏಪ್ರಿಲ್ ಒಂದರಿಂದ ಪ್ರತಿ ಯೂನಿಟ್‌ಗೆ ಮತ್ತೆ ೩೬ ಪೈಸೆಯನ್ನು ಹೆಚ್ಚಿಸುತ್ತಿದೆ. ಸರ್ಕಾರ ವರ್ಷಕ್ಕೆ ಎರಡು ಮೂರು ಬಾರಿಯಾದರೂ ವಿದ್ಯುತ್ ದರವನ್ನು ಏರಿಸುತ್ತಿದೆಯಾದರೂ ಗೃಹಜ್ಯೋತಿ ಯೋಜನೆಯಡಿ ನೀಡಿರುವ ಯೂನಿಟ್‌ಗಳಲ್ಲಿ ಯಾವುದೇ ಪರಿಷ್ಕರಣೆ ಮಾಡಿಲ್ಲ. ಆದ್ದರಿಂದ ಸರ್ಕಾರ ನೀಡುತ್ತಿರುವ ಉಚಿತ ಯೂನಿಟ್‌ಗಳನ್ನು ಪರಿಷ್ಕರಿಸಿ ಶೇ.೧೦ರಿಂದ ಶೇ.೨೦ ಯೂನಿಟ್‌ಗಳನ್ನು ಹೆಚ್ಚುವರಿಯಾಗಿ ನೀಡಿದರೆ ಮತ್ತಷ್ಟು ಅನುಕೂಲವಾಗಲಿದೆ. ಸರ್ಕಾರ ಈ ಬಗ್ಗೆ ಯೋಚಿಸಿ ಕಾರ್ಯರೂಪಕ್ಕೆ ತರಲಿ.
-ಹರಳಹಳ್ಳಿ ಪುಟ್ಟರಾಜು, ಪಾಂಡವಪುರ.





