ಕಳೆದ ೨೫ ವರ್ಷಗಳಲ್ಲಿ ಷೇರುಪೇಟೆ ಸೇರಿದಂತೆ ಉಳಿದೆಲ್ಲ ಸ್ಥಿರಾಸ್ತಿಗಳ ಮೇಲಿನ ಹೂಡಿಕೆಗಿಂತ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಅತಿ ಹೆಚ್ಚಿನ ಲಾಭ ತಂದುಕೊಡುತ್ತಿದ್ದು, ಚಿನ್ನ ಮತ್ತು ಬೆಳ್ಳಿಯ ಬೆಲೆ ಗಗನಕ್ಕೆ ಏರುತ್ತಿದೆ.
೧೯೯೯ರಲ್ಲಿ ೧೦ ಗ್ರಾಂ ಚಿನ್ನಕ್ಕೆ ರೂ.೪೪,೦೦೦ ಇದ್ದರೆ, ಇದೀಗ ಅದರ ಬೆಲೆ ೧.೪೦ ಲಕ್ಷ ರೂ.ಗೆ ತಲುಪಿ ಸಾರ್ವಕಾಲಿಕ ದಾಖಲೆಯಾಗಿದೆ. ಅದೇ ರೀತಿ ಒಂದು ಕೆಜಿ ಬೆಳ್ಳಿಗೆ ೧೯೯೯ ರಲ್ಲಿ ರೂ.೮,೧೦೦ ಆಗಿದ್ದರೆ, ಪ್ರಸ್ತುತ ಒಂದು ಕೆಜಿ ಬೆಳ್ಳಿಯ ಬೆಲೆ ೨.೫೦. ಲಕ್ಷ ರೂ. ಸಮೀಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆಗಳು ಈಗ ಮತ್ತಷ್ಟು ಆಕರ್ಷಕವಾಗಿವೆ.
-ಕೆ.ವಿ.ವಾಸು, ವಿವೇಕಾನಂದ ನಗರ,ಮೈಸೂರು





