ಹಿರಿಯ ಕಾರ್ಮಿಕ ಧುರೀಣ, ಕಮ್ಯುನಿಸ್ಟ್ ಪಕ್ಷದ ಹಿರಿಯ ನಾಯಕ ಅನಂತ ಸುಬ್ಬರಾವ್ ಕಳೆದ ಸುಮಾರು ೪-೫ ದಶಕಗಳಿಂದ ಕಾರ್ಮಿಕ ಚಳವಳಿಗಳಲ್ಲಿ ಮುಂಚೂಣಿಯಲ್ಲಿದ್ದವರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕರ ಒಕ್ಕೂಟಗಳ ನೇತೃತ್ವ ವಹಿಸಿ, ನೂರಾರು ಕಾರ್ಮಿಕ ಚಳವಳಿಗಳಿಗೆ ಪ್ರೇರಕ ಶಕ್ತಿಯಾಗಿದ್ದರು. ಅವರ ಸಾವಿನ ಸಂದರ್ಭದಲ್ಲಿ ಕೂಡ ಸಾರಿಗೆ ನಿಗಮದ ನೌಕರರ ಬೆಂಗಳೂರು ಚಲೋ ಕಾರ್ಯಕ್ರಮದ ಅಂತಿಮ ಸಿದ್ಧತೆಯಲ್ಲಿದ್ದರು ಎನ್ನಲಾಗಿದೆ. ಉದ್ದೇಶಿತ ಬೆಂಗಳೂರು ಚಲೋ ಕಾರ್ಯಕ್ರಮ ಜ.೨೯ರಂದು ನಿಗದಿಯಾಗಿತ್ತು.
ಕಾರ್ಮಿಕ ನಾಯಕರಿಗೆ ಇರಬೇಕಾದ ಶಿಸ್ತು, ಸಂಯಮ, ಬದ್ಧತೆ, ದೂರದರ್ಶಿತ್ವ, ಕಾರ್ಮಿಕ ಕಾನೂನುಗಳ ಬಗ್ಗೆ ಆಳವಾದ ಅರಿವು, ಕಾರ್ಮಿಕರ ಸಮಸ್ಯೆಗಳ ಬಗ್ಗೆ ಆಳವಾದ ಅಧ್ಯಯನ ಮತ್ತು ಅವುಗಳ ಪರಿಹಾರೋಪಾಯಗಳನ್ನು ಅರಿತಿದ್ದ ಸುಬ್ಬರಾಯರ ನಿಧನವು ದೇಶದ ಕಾರ್ಮಿಕ ಹೋರಾಟಗಳಿಗೆ ಉಂಟಾದ ತೀವ್ರ ನಷ್ಟವಾಗಿದೆ.
-ಕೆ.ವಿ.ವಾಸು, ವಿವೇಕಾನಂದ ನಗರ,ಮೈಸೂರು




