Mysore
18
overcast clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಓದುಗರ ಪತ್ರ: ಮೇಕೆ ದಾಟು: ಕರ್ನಾಟಕಕ್ಕೆ ಸಂದ ಜಯ

ಓದುಗರ ಪತ್ರ

ಮೇಕೆದಾಟು ಯೋಜನೆಯ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಗುರುವಾರ ವಜಾಗೊಳಿಸಿರುವುದು , ಕರ್ನಾಟಕದ ಜನತೆಗೆ ಸಂದ ಜಯವೆಂದೇ ಹೇಳಬೇಕು. ಅದರಲ್ಲೂ ಮುಖ್ಯವಾಗಿ ಬೆಂಗಳೂರು ಜನರಿಗೆ ಶಾಶ್ವತವಾಗಿ ಕುಡಿಯುವ ನೀರಿಗೆತೊಂದರೆ ಇಲ್ಲದಂತಾಗುತ್ತದೆ.

ಯಾವುದೇ ರಾಜಕೀಯ ಪಕ್ಷವೂ ಇದರಲ್ಲಿ ರಾಜಕಾರಣ ಮಾಡದೆ ರಾಜ್ಯಕ್ಕೆ ದೊರೆತಿರುವ ಈ ಅಪೂರ್ವ ಗೆಲುವನ್ನು ತುಂಬು ಹೃದಯದಿಂದ ಸ್ವಾಗತಿಸ ಬೇಕು . ತಮಿಳುನಾಡು ಸರ್ಕಾರ ಮತ್ತೆ ಕ್ಯಾತೆ ತೆಗೆದು ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಲು ಅವಕಾಶ ನೀಡದೆ ರಾಜ್ಯ ಸರ್ಕಾರವು ಈ ಕೂಡಲೇ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಯಾವುದೇ ಅಡೆ ತಡೆ ಇಲ್ಲದೆ ಈ ಯೋಜನೆ ಪೂರ್ಣಗೊಳ್ಳಲಿ ಎಂಬುದೇ ರಾಜ್ಯದ ಜನರ ಆಶಯವಾಗಿದೆ.

 -ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು

 

 

 

Tags:
error: Content is protected !!