ಸಗ್ಗದ ಸಿರಿ ಹಿಗ್ಗಿನ ಪರಿ
ಬಿರಬಿರಸೆ ಬ೦ದಿದೆ ನನ್ನೂರಿಗೆ
ಮಲ್ಲಿಗೆಯ ಮೈಸೂರಿಗೆ
ಸಿಂಗಾರಗೊಂಡಿದೆ.
ರಸ್ತೆರಸ್ತೆಗಳಲ್ಲಿ ಇಳಿಬಿಟ್ಟಿ
ಬಣ್ಣ ಬಣ್ಣದ ದೀಪಗಳ ತೋರಣ
ಅಡಿಗಡಿಗೆ ಸಂಭ್ರಮದ ರಿಂಗಣ
ಮಿರಿಮಿರಿ ಮಿಂಚುತ್ತಿವೆ.
ಸುತ್ತಮುತ್ತಲಿನ ವೃತ್ತಗಳು
ಬೆಳಕಿನ ಹೂಗಳ ಬಿಟ್ಟು
ನಗು ಚೆಲ್ಲುತ್ತಿವೆ ರಾತ್ರಿಯಲಿ
ಗಿಡ ಮರಬಳ್ಳಿಗಳು
ಮದುವಣಿಗಿತ್ತಿಯೂ
ನಾಚುತಿಹಳು ಇವಳ
ಮೈ(ಸೂರು)ಬಣ್ಣವ ಕಂಡು !
-ಮ.ಗು.ಬಸವಣ್ಣ, ಜೆಎಸ್‌ಎಸ್ ಬಡಾವಣೆ, ಮೈಸೂರು.





