ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಎಂಡಿಎ)ದ ಆಸ್ತಿ ರಕ್ಷಣೆ ಪ್ರತ್ಯೇಕ ಪೊಲೀಸ್ ಭದ್ರತಾ ಪಡೆಯ ರಚನೆಗೆ ಎಂಡಿಎ ಆಯುಕ್ತರು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹ. ಇತ್ತೀಚೆಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮೈಸೂರ ಅಭಿವೃದ್ಧಿ ಪ್ರಾಧಿಕಾರದ ಆಸ್ತಿಯನ್ನು ಮೂಲ ವಾರಸುದಾರರಿಗೆ ಗೊತ್ತಾಗದಂತೆ ಪರಭಾರೆ ಮಾಡಿರುವುದು ಹಾಗೂ ಎಂಡಿಎ ಆಸ್ತಿಯಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಈ ವಿಚಾರವಾಗಿ ನಿವೇಶನದ ಮಾಲೀಕರು ನ್ಯಾಯಾಲಯದ ಮೆಟ್ಟಿಲೇರಿರುವುದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ಮನಗಂಡ ಎಂಡಿಎ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳು ಚರ್ಚಿಸಿ ಒತ್ತುವರಿ ತೆರವು ಕಾರ್ಯಾಚರಣೆಯ ಭದ್ರತೆಗೆ ಪ್ರತ್ಯೇಕ ಪೊಲೀಸ್ ಭದ್ರತೆ ಪಡೆ ರಚಿಸಲು ಕ್ರಮಕೈಗೊಂಡಿದ್ದು, ಇದರಿಂದ ಅಕ್ರಮಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ.
-ಪಿ. ಸಿ. ಕಂಗಾಣಿ ಸೋಮು, ಕ್ಯಾತಮಾರನಹಳ್ಳಿ, ಮೈಸೂರು





