Mysore
19
overcast clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಓದುಗರ ಪತ್ರ | ಫಲಪುಷ್ಪ ಪ್ರದರ್ಶನ ಟಿಕೆಟ್ ದರ ದುಬಾರಿಯಾಗದಿರಲಿ

ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ೧೦ ವರ್ಷಗಳ ನಂತರ ಇದೀಗ ೧೧ದಿನಗಳ ಫ್ಲವರ್ ಶೋ ಏರ್ಪಡಿಸಲಾಗಿದೆ. ಟಿಕೆಟ್ ದರ ವಯಸ್ಕರಿಗೆ ೩೦ ರೂ. , ೧೦ ವರ್ಷದ ಒಳಗಿನ ಮಕ್ಕಳಿಗೆ ೧೦ ರೂ. ಹಾಗೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಿದೆ. ಇದು ಜನ ಸ್ನೇಹಿಯಾಗಿದೆ.

ಆದರೆ ಮೈಸೂರು ನಗರದಲ್ಲಿ ದಸರಾ ವೇಳೆ ನಡೆಯುವ ಫಲ ಪುಷ್ಪ ಪ್ರದರ್ಶನದ ಟಿಕೆಟ್ ದರವನ್ನು ೪೦ ರೂ. ನಿಗದಿಪಡಿಸಲಾಗಿದೆ . ಲಿಂಗಾಂಬುಧಿ ಪಾರ್ಕ್‌ನಲ್ಲಿನ ಫ್ಲವರ್ ಶೋಗೆ ೬೦ ರೂ. ಟಿಕೆಟ್ ನಿಗದಿ ಮಾಡಿರುವುದು ದುಬಾರಿಯಾಗಿದೆ. ಇನ್ನು ಮುಂದಾದರೂ ಸರ್ಕಾರದಿಂದ ನಡೆಯುವ ವಸ್ತು ಪ್ರದರ್ಶನ, ವಾಹನ ನಿಲುಗಡೆ, ಫ್ಲವರ್ ಶೋಗಳಲ್ಲಿ ಕನಿಷ್ಠ ದರ ನಿಗದಿಪಡಿಸಿದರೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ.

-ಮುಳ್ಳೂರು ಪ್ರಕಾಶ್, ಕನಕದಾಸನಗರ, ಮೈಸೂರು

Tags:
error: Content is protected !!