ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು ಕಚೇರಿಗಳಲ್ಲಿ ಮಹಿಳಾ ನೌಕರರು ಮದುವೆ ಮನೆಗೆ ಬಂದಂತೆ ಸಿಂಗರಿಸಿಕೊಂಡು ಬರುತ್ತಾರೆ.
ಕೆಲವು ಮಹಿಳೆಯರು ಪ್ಯಾಂಟ್, ಶರ್ಟ್ ಧರಿಸಿ ಬರುವುದು ಕಂಡು ಬರುತ್ತದೆ. ಕೆಲವು ಪುರುಷ ನೌಕರರು ಟಿ ಶರ್ಟ್ ಹಾಕಿಕೊಂಡು ಬರುತ್ತಾರೆ. ರಾಜ್ಯ ಸರ್ಕಾರ ಈಗ ಹೊರಡಿಸಿರುವ ಆದೇಶ ಸಂಪೂರ್ಣ ಅನುಷ್ಠಾನಕ್ಕೆ ತರಲು ಆಯಾ ಇಲಾಖೆಯ ಮುಖ್ಯಸ್ಥರು ಗಮನಹರಿಸಬೇಕು. ಶಾಲಾ ಮಕ್ಕಳಿಗೆ ಒಂದೊಂದು ಬಗೆಯ ವಸ ಸಂಹಿತೆ ಇರುವಂತೆ, ಪ್ರತಿ ಸರ್ಕಾರಿ ಇಲಾಖೆಗೂ, ಒಂದೊಂದು ಬಗೆಯ ವಸ ಸಂಹಿತೆಯನ್ನು ರಾಜ್ಯ ಸರ್ಕಾರ ರೂಪಿಸಿ ಆದೇಶ ಹೊರಡಿಸಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪು ನಗರ, ಮೈಸೂರು





