Mysore
33
scattered clouds

Social Media

ಗುರುವಾರ, 02 ಏಪ್ರಿಲ 2026
Light
Dark

ಓದುಗರ ಪತ್ರ: ಅಂಕಗಳನ್ನು ಹೋಲಿಸಿ ಆತ್ಮಸ್ಥೈರ್ಯವನ್ನು ಕುಗ್ಗಿಸದಿರಿ

ಈಗಾಗಲೇ ಶಾಲಾ ಕಾಲೇಜುಗಳ ವಾರ್ಷಿಕ ಪರೀಕ್ಷೆ ಮುಗಿದಿದ್ದು, ಕೆಲವೇ ದಿನಗಳಲ್ಲಿ ದ್ವಿತೀಯ ಪಿಯುಸಿ -ಲಿತಾಂಶ ಬರಲಿದ್ದು, ನಂತರ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನೂ ಪ್ರಕಟಿಸಲಾಗುತ್ತದೆ. ಈ ಸಮಯದಲ್ಲಿ ಮಕ್ಕಳ ಮನಸ್ಸಿಗೆ ಬೇಸರವಾಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಯಾವ ಶ್ರೇಣಿಯಲ್ಲಿ ಫಲಿತಾಂಶ ಬಂದರೂ ಅಥವಾ ಅನುತ್ತೀರ್ಣಗೊಂಡರೂ ಪೋಷಕರು ತಮ್ಮ ಮಕ್ಕಳೊಂದಿಗೆ ಬೇರೆ ಮಕ್ಕಳನ್ನು ಹೋಲಿಸಿ ನಿಂದಿಸುವುದು, ಅವರಿಗಾಗಿ ಖರ್ಚು ಮಾಡಿದ ಪಟ್ಟಿಯನ್ನು ಹೇಳಿ ಹಂಗಿಸುವುದನ್ನು ಮಾಡಬಾರದು.

ಪೋಷಕರ ಟೀಕೆಗಳಿಂದ ಮಕ್ಕಳು ಮನೆ ಬಿಟ್ಟು ಹೋಗಬಹುದು ಅಥವಾ ಮನನೊಂದು ಆತ್ಮಹತ್ಯೆಗೂ ಯತ್ನಿಸಬಹುದು. ಎಲ್ಲ ಮಕ್ಕಳ ಬುದ್ಧಿಮಟ್ಟ ಒಂದೇ ತರಹ ಇರುವುದಿಲ್ಲ. ಬದುಕುವುದಕ್ಕೆ ಹಲವಾರು ಮಾರ್ಗಗಳಿವೆ. -ಲಿತಾಂಶ ಏನೇ ಆದರೂ ಮಕ್ಕಳನ್ನು ಪ್ರೋತ್ಸಾಹಿಸಿದರೆ ಮುಂದಿನ ತರಗತಿಯಲ್ಲಿ ಓದುವ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ತಂದೆ ತಾಯಿಯ ಬಗ್ಗೆ ಗೌರವ ಹೆಚ್ಚಾಗುತ್ತದೆ. ತಮ್ಮ ಮಕ್ಕಳನ್ನು ಪ್ರೀತಿಸುವುದರೊಂದಿಗೆ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೂ ಪೋಷಕರ ಕರ್ತವ್ಯ

-ಎಂ. ಎಸ್.ಉಷಾ ಪ್ರಕಾಶ್, ಎಸ್.ಬಿ.ಎಂ.ಕಾಲೋನಿ, ಮೈಸೂರು

Tags:
error: Content is protected !!