ಹಿಂದೂ ಧರ್ಮ ಪಾಲನೆ ಮಾಡುವವರು ಧಾರ್ಮಿಕ ಶ್ರದ್ಧೆಯಿಂದ ಸ್ವಯಂಪ್ರೇರಿತರಾಗಿ ಮಹಾಕುಂಭಮೇಳದಲ್ಲಿ ಭಾಗವಹಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ. ಆದರೆ ಕೆಲ ರಾಜಕಾರಣಿಗಳು ಇದನ್ನು ಟೀಕಿಸುತ್ತಿದ್ದು, ‘ಕುಂಭಮೇಳದಲ್ಲಿ ಸ್ನಾನ ಮಾಡುವುದರಿಂದ ಬಡತನ ನಿರ್ಮೂಲನೆ ಆಗುತ್ತದೆಯೇ?’ ಎಂದು ಲೇವಡಿ ಮಾಡುತ್ತಾ ಕೋಟ್ಯಂತರ ಹಿಂದೂ ಸಮುದಾಯದವರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ.
ಅಖಿಲೇಶ್ ಯಾದವ್ ಅಧಿಕಾರದಲ್ಲಿದ್ದಾಗ ನಡೆದ ಇಂತಹ ಧಾರ್ಮಿಕ ಸಮಾರಂಭಗಳ ಬಗ್ಗೆ ಧ್ವನಿ ಎತ್ತದ ಹಾಗೂ ಇತರೆ ಯಾವುದೇ ಧರ್ಮಗಳ ಆಚರಣೆಗಳ ಬಗ್ಗೆ ಮಾತನಾಡದೆ ಕೇವಲ ಒಂದು ಧರ್ಮದ ಎಲ್ಲ ಧಾರ್ಮಿಕ ಆಚರಣೆಗಳನ್ನು ಲೇವಡಿ ಮಾಡುವುದು ಸೊಗಲಾಡಿತನದ ಪರಮಾವಧಿ ಅಲ್ಲವೇ? ೩೫-೪೦ ಕೋಟಿ ಜನ ಸೇರಿರುವ ಕುಂಭಮೇಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಾ, ‘ನನ್ನ ಅಂದಾಜಿನ ಪ್ರಕಾರ ಅಲ್ಲಿನ ಕಾಲ್ತುಳಿತದಲ್ಲಿ ೧೦೦೦ ಮಂದಿ ಸಾವನ್ನಪ್ಪಿದ್ದಾರೆ’ ಎನ್ನುವ ಮಲ್ಲಿಕಾರ್ಜುನ ಖರ್ಗೆರವರ ಹೇಳಿಕೆ ನಿಜಕ್ಕೂ ಖಂಡನೀಯ. ಹಿಂದೂಗಳ ಭಾವನೆಗೆ ಧಕ್ಕೆ ತರುವ ಇಂತಹ ಹೇಳಿಕೆಗಳಿಗೆ ಧಿಕ್ಕಾರವಿರಲಿ. ಇನ್ನಾದರೂ ಕಾಂಗ್ರೆಸ್ ಪಕ್ಷದ ಕೆಲ ನಾಯಕರು ತಮ್ಮ ಸ್ಥಾನಕ್ಕೆ ಘನತೆ ತರುವಂತೆ ನಡೆದುಕೊಳ್ಳಲಿ.
-ಶಿವಮೊಗ್ಗ ನಾ. ದಿನೇಶ್ ಅಡಿಗ, ಮೈಸೂರು.





