ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದಲ್ಲಿರುವ ಮುಡಿಗುಂಡಂನ ಸರ್ಕಾರಿ ರೇಷ್ಮೆ ಮಾರುಕಟ್ಟೆಯ ಎದುರು ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಸೇರಿರುವ ಸಾರ್ವಜನಿಕ ಗ್ರಂಥಾಲಯ ಕಟ್ಟಡವಿದ್ದರೂ ಓದುಗರಿಗೆ ಬಳಕೆಗೆ ಬಾರದಂತಾಗಿದೆ.
ಈ ಗ್ರಂಥಾಲಯದ ಸುತ್ತಲೂ ಅನೇಕ ಗಿಡಗಳು ಬೆಳೆದು ನಿಂತಿದ್ದು, ಕ್ರಿಮಿಕೀಟಗಳು, ಸೊಳ್ಳೆಗಳು ಹಾಗೂ ವಿಷ ಜಂತುಗಳು ಓಡಾಡುತ್ತಿವೆ. ಗ್ರಾಮಕ್ಕೊಂದು ಗ್ರಂಥಾಲಯವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವವರಿಗೆ ಉಪಯೋಗ ಆಗುತ್ತದೆ. ಹಾಗಾಗಿ ಮುಡಿಗುಂಡಂನಲ್ಲಿರುವ ಗ್ರಂಥಾಲಯ ಕಟ್ಟಡವನ್ನು ಕೂಡಲೇ ತೆರೆಯುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕಾಗಿದೆ.
– ನಾಗೇಶ್, ಮಾನಸಗಂಗೋತ್ರಿ, ಮೈಸೂರು





